Accident; ರಾಮನಗರದ ಬಳಿ ಭೀಕರ ಅಪಘಾತ; ಹೊರ ರಾಜ್ಯದ ಮೂವರ ದುರ್ಮರಣ
ರಾಮನಗರ; ಅತಿವೇಗದ ಚಾಲನೆಯಿಂದ ಪ್ರಾಣಕ್ಕೇ ಕುತ್ತು ಅನ್ನೋದ ಎಲ್ಲರಿಗೂ ಗೊತ್ತಿದೆ. ಜೊತೆಗೆ ಬೈಕ್‌ನಲ್ಲಿ ಮೂವರು, ನಾಲ್ಕು ಜನ ಪ್ರಯಾಣ ಮಾಡುವಂತಿಲ್ಲ. ಇದರಿಂದ ಸವಾರನ ನಿಯಂತ್ರಣ ತಪ್ಪಿ ಅಪಘಾತಗಳಿಗೆ ಕಾರಣವಾಗುತ್ತದೆ. ಈ ಬಗ್ಗೆ ಸಾರಿಗೆ ಕಾಲಕಾಲಕ್ಕೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದೆ. ಜೊತೆಗೆ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಸಾವಿರಗಟ್ಟಲೆ ದಂಡವನ್ನೂ ವಿಧಿಸಲಾಗುತ್ತಿದೆ. ಹೀಗಿದ್ದರೂ, ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೇ ಕಾರಣಕ್ಕೆ ಇಂದು ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣ ಮಾಡುತ್ತಿದ್ದು, ಈ ವೇಳೆ ನಡೆದ ಅಪಘಾತದಲ್ಲಿ ಮೂವರೂ ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿ; Millionaires Mindset; ದೇಶದ 79ರಷ್ಟು ಕೋಟ್ಯಧೀಶರು Zero ಇಂದ Hero ಆದವರು..!
ಉತ್ತರ ಪ್ರದೇಶದ ಮೂಲದ ಮೂವರು ಕಾರ್ಮಿಕರ ಸಾವು!;
ಉತ್ತರ ಪ್ರದೇಶದ ಮೂಲದ ಮೂವರು ಕಾರ್ಮಿಕರ ಸಾವು!; ಉತ್ತರ ಪ್ರದೇಶದಿಂದ ಮೂವರು ಕಾರ್ಮಿಕರು ಕೆಲಸ ಹುಡುಕಿಕೊಂಡು ರಾಜ್ಯಕ್ಕೆ ಬಂದಿದ್ದರು. ರಾಮನಗರ ಬಳಿಯ ಹಾರೋಹಳ್ಳಿ ಸಮೀಪದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವತ್ತು ಕೂಡಾ ಎಂದಿನಂಯೆ ಬೈಕ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಮೂವರು ಒಂದೇ ಬೈಕ್‌ಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಬೈಕ್ ಅಪಘಾತಕ್ಕೀಡಾಗಿದೆ. ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೀವನ ನಿರ್ವಹಣೆಗಾಗಿ ದೂರದ ಉತ್ತರ ಪ್ರದೇಶದಿಂದ ಇಲ್ಲಿಗೆ ಕೆಲಸ ಅರಸಿ ಬಂದಿದ್ದ ಮೂವರು ಕಾರ್ಮಿಕರು, ಇಂದು ಬೀದಿಯಲ್ಲಿ ಹೆಣವಾಗಿದ್ದಾರೆ.
ತಾಮಸಂದ್ರದ ಬಳಿ ಕಾರಿಗೆ ಬೈಕ್ ಡಿಕ್ಕಿ;
ತಾಮಸಂದ್ರದ ಬಳಿ ಕಾರಿಗೆ ಬೈಕ್ ಡಿಕ್ಕಿ; ಬೈಕ್‌ನಲ್ಲಿ ಮೂವರು ಕಾರ್ಮಿಕರೂ ಹೊರಟಿದ್ದರು. ಬೈಕ್ ರಾಮನಗರದ ಹಾರೋಹಳ್ಳಿ ಬಳಿಯ ತಾಮಸಂದ್ರ ಬಳಿ ಬಂದಿದೆ. ಈ ವೇಳೆ ಎದುರಿಗೆ ಬಂದ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಡಿ ಸಿಲುಕಿದ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹಾರೋಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೃಷ್ಣ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೋಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.