BengaluruCrime

ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣಿಗೆ ಕೊರಳೊಡ್ಡಿದ ಜಿಮ್ ಟ್ರೈನರ್

ಬೆಂಗಳೂರು; ಪತ್ನಿಗೆ ವಿಡಿಯೋ ಕಾಲ್ ಮಾಡಿ ಜಿಮ್ ಟ್ರೈನರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಿಹಾರ ಮೂಲದ ಅಮಿತ್ ಕುಮಾರ್ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು..

   10 ವರ್ಷದ ಹಿಂದೆ ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ ಅಮಿತ್ ಕುಮಾರ್ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ.. ವರ್ಷದ ಹಿಂದೆ ಜಿಮ್ ಸಮೀಪವೇ ವಾಸವಿದ್ದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ..

  ಇತ್ತೀಚೆಗೆ ಪತ್ನಿ ನರ್ಸಿಂಗ್ ಕೋರ್ಸ್ ಗೆ ಸೇರಿದ್ದಳು.. ಅಂದಿನಿಂದ ಆಕೆ ಗಂಡನಿಗೆ ಸಮಯ ಕೊಡುತ್ತಿರಲಿಲ್ಲವಂತೆ.. ಬದಲಿಗೆ ಯಾವಾಗಲೂ ಮೊಬೈಲ್ ನಲ್ಲಿ ಮಾತಾಡುತ್ತಿದ್ದಳಂತೆ.. ಇದರಿಂದ ಜಗಳವಾಗಿದ್ದು ಕೆಲ ದಿನಗಳ ಹಿಂದೆ ಪತ್ನಿ ಮನೆ ಬಿಟ್ಟು ಹೋಗಿದ್ದಳು.

   ಇದರಿಂದ ಗಂಡ ಅಮಿತ್ ಕುಮಾರ್ ಪದೇ ಪದೇ ಕರೆ ಮಾಡಿ ಮನೆಗೆ ಬರುವಂತೆ ಮನವಿ ಮಾಡುತ್ತಿದ್ದ.. ಕೊನೆಗೆ ವಿಡಿಯೋ ಕಾಲ್ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೇಣಿಗೆ ಕೊರಳೊಡ್ಡಿ ಬೆದರಿಸಿದ್ದಾನೆ.. ಈ ವೇಳೆ ಮೊಬೈಲ್ ಜಾರಿಬಿದ್ದಿದೆ.. ಅದನ್ನು ಹಿಡಿಯಲು ಹೋದಾಗ ಆತನ ಕುತ್ತಿಗೆಗೆ ನೇಣು ಬಿಗಿದಿದೆ.. ಪತ್ನಿಗೆ ಬೆದರಿಸಲು ಹೋಗಿ ಆತ ಸಾವನ್ನಪ್ಪಿದ್ದಾನೆ..

 

Share Post