ಹನಿ ನೀರಿಗಾಗಿ ಪ್ರಾಣ ಬಿಟ್ಟ ಜಿರಾಫೆಗಳು: ಅಳಿವಿನಂಚಿನಲ್ಲಿ 4,000 ಮೂಕಜೀವಿಗಳು
ಆಫ್ರಿಕಾ: ತಿನ್ನಲು ಆಹಾರ, ಕುಡಿಯಲು ನೀರಿಲ್ಲದೆ ಒದ್ದಾಡಿ ಒದ್ದಾಡಿ ಏರು ಜಿರಾಫೆಗಳು ಪ್ರಾಣ ಬಿಟ್ಟ ಮನಕಲುಕುವ ಘಟನೆ ಆಫ್ರಿಕಾದ ಕೀನ್ಯಾದಲ್ಲಿ ನಡೆದಿದೆ. ಮನುಷ್ಯರಿಗೆ ಒಂದು ಹೊತ್ತು ಊಟ ನೀರಿಲ್ಲದೆ ಬದುಕಲಾರ, ಅಂಥದ್ರಲ್ಲಿ ಮೂಕಜೀವಿಗಳು ನೀರಿಲ್ಲದೆ ಅಲೆದಾಡಿ ಅಲೆದಾಡಿ ಪ್ರಾಣ ಬಿಟ್ಟಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೀನ್ಯಾ ಉತ್ತರ ಭಾಗದಲ್ಲಿ ಕಳೆದ ಸಪ್ಟೆಂಬರ್‌ನಿಂದ ಶೇ.30ಕ್ಕಿಂತ ಕಡಿಮೆ ಮಳೆಯಾಗಿದೆ. ಸಕಾಲಕ್ಕೆ ಮಳೆಯಾಗದ ಕಾರಣ ಆ ಪ್ರದೇಶ ಪೂರ್ತಿ ಬರಗಾಲ ಆವರಿಸಿದೆ. ಮಳೆಯಿಲ್ಲದೆ ನೀರು ಎಲ್ಲಿಂದ ಬರಬೇಕು? ದಾಹ ತಡೆಯಲಾರದೆ ನೀರನ್ನು ಹುಡುಕುತ್ತಾ ಆರು ಆನೆಗಳು ಕನ್ಸರ್‌ವೆನ್ಸಿಯ ಜಲಾಶಯದ ಬಳಿ ಹೋಗಿವೆ. ಅಲ್ಲಿರ ಕೆಸರಿನ ಮಡುವಿನಲ್ಲಿ ಹೂತುಹೋಗಿವೆ. ಆಚೆ ಬರಲಾರದೆ ಹಸಿವು ಮತ್ತು ನೀರಿನ ದಾಹದಿಂದ ಸಾವಿಗೀಡಾಗಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಜಿರಾಫೆಗಳು ಸತ್ತು ಬಿದ್ದಿರುವ ಫೋಟೋಗಳನ್ನು ನೋಡ್ತಿದ್ರೆ ಕರುಳು ಕಿತ್ತು ಬರುವಂತಿದೆ. ಸಾಕು ಪ್ರಾಣಿಗಳಿಗೆ ಆಹಾರ, ನೀರಿನ ವ್ಯವಸ್ಥೆ ಮಾಡಲು ಪರಿಪಾಟಲು ಪಡುವಂತಾಗಿದೆ. ಹೀಗಿರುವಾಗ ವನ್ಯ ಜೀವಿಗಳಿಗೆ ಆಹಾರ ನೀರು ಪೂರೈಕೆ ಹೇಗೆ ಮಾಡುವುದು ಎಂದು ಅಲ್ಲಿನ ಸರ್ಕಾರ ಚಿಂತೆಗೀಡಾಗಿದೆ. ಇನ್ನೂ ಆತಂಕಕಾರಿ ವಿಚಾರ ಅಂದ್ರೆ ಈ ಬರಗಾಲದ ಬವಣೆಯಿಂದ ಇನ್ನೂ 4,000ಮೂಕ ಪ್ರಾಣಿಗಳು ಅಳಿವಿನ ಅಂಚಿನಲ್ಲಿವೆ ಎಂಬ ಆತಂಕಕಾರಿ ವಿಚಾರ ಕೂಡ ಬಹಿರಂಗವಾಗಿದೆ.