CrimeDistricts

ಮೂರು ತಿಂಗಳ ಮಗುವನ್ನು ಅನಾಥವಾಗಿ ಬಿಟ್ಟುಹೋದ ತಾಯಿ!

ತುಮಕೂರು; ಮೂರು ತಿಂಗಳ ಮಗುವನ್ನು ತಾಯಿಯೊಬ್ಬಳು ರಸ್ತೆ ಬದಿ ಅನಾಥವಾಗಿ ಬಿಟ್ಟು ಹೋಗಿರುವ ಘಟನೆ ನಡೆದಿದೆ.. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹೆಡಗರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಗುವನ್ನು ರಕ್ಷಣೆ ಮಾಡಲಾಗಿದೆ..

ರಸ್ತೆ ಬದಿಯಲ್ಲಿ ಮಗು ಅಳುತ್ತಿರುವುದನ್ನು ಆಶಾ ಕಾರ್ಯಕರ್ತೆಯೊಬ್ಬರು ನೋಡಿದ್ದಾರೆ.. ಆಕೆ ಕೂಡಲೇ ಮಗುವನ್ನು ರಕ್ಷಣೆ ಮಾಡಿದ್ದು, ಆಂಬ್ಯುಲೆನ್ಸ್ ಮೂಲಕ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.. ಆಶಾ ಕಾರ್ಯಕರ್ತೆ ಕಲಾವತಿ ಅವರು ರಾತ್ರಿ ಊಟ ಮಾಡಿ ವಾಕಿಂಗ್‌ ಮಾಡುತ್ತಿದ್ದರು.. ಈ ವೇಳೆ ಮಗುವಿನ ಅಳುವಿನ ಶಬ್ದ ಕೇಳಿಸಿದೆ.. ಕೂಡಲೇ ಆಕೆ ನೊಣವಿನ ಕೆರೆ ಪೊಲೀಸರಿಗೆ ಮಾಹಿತಿ ನೀಡಿ, ಮಗುವನ್ನು ರಕ್ಷಿಸಿದ್ದಾರೆ..

ಆರೋಗ್ಯವಾಗಿರುವ ಮಗು 4.5 ಕೆಜಿಯಷ್ಟು ತೂಕವಿದೆ ಎಂದು ತಿಳಿದುಬಂದಿದೆ. ಮಗುವಿನ ಪೋಷಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ..

 

Share Post