ಮಗನ ಎದುರೇ ಟಿಪ್ಪು ಡ್ರಾಪ್‌ನಿಂದ ಹಾರಲು ಯತ್ನಿಸಿದ ಮಹಿಳೆ; ಮುಂದೇನಾಯ್ತು..?
ಚಿಕ್ಕಬಳ್ಳಾಪುರ; ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನಂದಿ ಬೆಟ್ಟದ ಟಿಪ್ಪು ಡ್ರಾಪ್‌ನಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಆದ್ರೆ ಕೊನೇ ಕ್ಷಣದಲ್ಲಿ ಆಕೆಯ ಪ್ರಾಣ ಉಳಿದಿದೆ. ಇನ್ನೇನು ಕೆಲ ಸೆಕೆಂಡುಗಳಲ್ಲಿ ಆಕೆ ಹಾರಬೇಕಿತ್ತು. ಅಷ್ಟರಲ್ಲಿ ಭಯಬೀತಗೊಂಡ ಮಗ ಜೋರಾಗಿ ಕಿರುಚಾಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದವರು, ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ಬೆಂಗಳೂರಿನ ಕೆಆರ್ ಪುರಂ ವಾಸಿ ಕಾವ್ಯಾ ಎಂಬುವವರು ತನ್ನ ಮಗನೊಂದಿಗೆ ನಂದಿ ಬೆಟ್ಟಕ್ಕೆ ಬಂದಿದ್ದರು. ಅಲ್ಲಿನ ಟಿಪ್ಪು ಡ್ರಾಪ್ ಬಳಿ ಬಂದ ಕಾವ್ಯಾ, ಮಗನ ಕೈಗೆ ಚಿನ್ನಾಭರಣ ಹಾಗೂ ಪರ್ಸ್ ನೀಡಿದ್ದಾಳೆ. ಅನಂತರ ಮೊಬೈಲ್‌ನಲ್ಲಿ ತನ್ನ ಸಾವಿಗೆ ಗಂಡ ನವೀನ್ ಹಾಗೂ ಅತ್ತೆ ಹಾಗೂ ಅವರ ಸಂಬಂಧಿಕರೇ ಕಾರಣ ಎಂದು ಹೇಳಿ ವಿಡಿಯೋ ಮಾಡಿದ್ದಾಳೆ. ಆ ಮೊಬೈಲ್‌ನ್ನ ಮಗನ ಕೈಗೆ ಕೊಟ್ಟ ಕಾವ್ಯಾ ಟಿಪ್ಪು ಡ್ರಾಪ್ ಮೂಲಕ ಹಾರಲು ತಯಾರಿ ನಡೆಸಿದ್ದಾಳೆ. ಇನ್ನೇ ಕಾವ್ಯಾ ಹಾರಬೇಕು ಅನ್ನುವಷ್ಟರಲ್ಲಿ ಮಗ ಜೋರಾಗಿ ಕಿರುಚಿಕೊಂಡಿದ್ದಾನೆ.
ಇದನ್ನು ಕೇಳಿ ಪ್ರವಾಸಿ ಮಿತ್ರ ಸಿಬ್ಬಂದಿ ನಳಿನಿ ಎಂಬುವವರು ಸಾರ್ವಜನಿಕರ ಸಹಾಯದಿಂದ ಕಾವ್ಯಾಳನ್ನು ರಕ್ಷಿಸಿದ್ದಾರೆ. ಆಕೆಯ ಮನವೊಲಿಸಿ, ಜಿಗಿಯದಂತೆ ಮಾಡಿದ್ದಾರೆ. ಟಿಪ್ಪು ಡ್ರಾಪ್‌ನಲ್ಲಿ ಆತ್ಮಹತ್ಯೆಗಳ ಸಂಖ್ಯೆ ಜಾಸ್ತಿಯಾಗಿತ್ತು. ಈ ಹಿನ್ನೆಯಲ್ಲಿ ಸರ್ಕಾರ ಅಲ್ಲಿ ಹತ್ತು ಅಡಿ ಎತ್ತರದ ತಡೆಗೋಡೆ ನಿರ್ಮಿಸಿದೆ. ಆದರೂ ಕೆಲವರು ಅಲ್ಲಿಯೇ ಬಂದು ಆತ್ಮಹತ್ಯೆ ಸಾಹಸ ಮಾಡುತ್ತಿದ್ದಾರೆ.