ಗಂಡ ಕಪ್ಪಗಿದ್ದಾನೆಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ!
ಉತ್ತರಪ್ರದೇಶ; ಗಂಡ ಕಪ್ಪಗಿದ್ದಾನೆ. ನೋಡಲು ಚೆನ್ನಾಗಿಲ್ಲ ಎಂದು ಕೊರಗುತ್ತಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಮಹಿಳೆ ಗಂಡನ ಬಣ್ಣ ಇಷ್ಟವಾಗದೇ ಕೊರಗಿ ಕೊರಗಿ ಕೊನೆಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯು ಸಿಯಾಲ್ ಖೇಡಾ ಮೊಹಲ್ಲಾ ಎಂಬಲ್ಲಿ ಈ ಘಟನೆ ನಡೆದಿದೆ..
25 ವರ್ಷದ ಸಿಮ್ರಾನ್ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ.. ಈಕೆ ಬರೌಲಾದ ಅಲಿಗದ ಜಫರಾಬಾದ್ ನಿವಾಸಿಯಾಗಿದ್ದು, ಸಿಯಾಲ್ ಖೇಡಾ ಮೊಹಲ್ಲಾದ ತೌಫಿಕ್ ನನ್ನು ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದಳು.. ತೌಫಿಕ್ ಪೇಂಟರ್ ಕೆಲಸ ಮಾಡುತ್ತಾನೆ ಎಂದು ತಿಳಿದುಬಂದಿದೆ.. ತೌಫಿಕ್ ಕಪ್ಪಗಿದ್ದುದರಿಂದ ಆತನನ್ನು ಮದುವೆಯಾಗೋದು ಸಿಮ್ರಾನ್‌ಗೆ ಇಷ್ಟವಿರಲಿಲ್ಲವಂತೆ.. ಅಕ್ಕಪಕ್ಕದವರು ಕೂಡಾ ಇದೇ ವಿಚಾರವನ್ನು ಹೇಳಿದ್ದಾರೆ..
ತೌಫಿಕ್ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಕೋಣೆಗೆ ಹೋದ ಸಿಮ್ರಾನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೋಮಡಿದ್ದಾಳೆ.. ಇದನ್ನು ನೋಡಿದ ಅಕ್ಕಪಕ್ಕದವರು ಪತಿ ತೌಫಿಕ್‌ಗೆ ಮಾಹಿತಿ ರವಾನೆ ಮಾಡಿದ್ದಾರೆ.. ನಂತರ ಪೊಲೀಸರಿಗೂ ಮಾಹಿತಿ ರವಾನಿಸಿದ್ದಾರೆ.. ಸಿಮ್ರಾನ್ ಸಹೋದರ ಈ ಬಗ್ಗೆ ಮಾತನಾಡಿದ್ದು, 4 ತಿಂಗಳ ಹಿಂದೆ ತೌಫಿಕ್ ಎಂಬಾತನಿಗೆ ನನ್ನ ಸಹೋದರಿಯನ್ನು ಕೊಟ್ಟು ವಿವಾಹ ಮಾಡಿಸಿದ್ದೆ.. ಆದ್ರೆ ಆತ ನನ್ನ ತಂಗಿಗೆ ಇಷ್ಟವಾಗಿರಲಿಲ್ಲ.. ಇದೇ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಿದ್ದಾನೆ..