DistrictsPolitics

ಮಂಡ್ಯ ಜನರೇ ಗಂಡಸರಾಗಿ, ಬಳೆ ತೊಟ್ಕೋಬೇಡಿ; ನಾಲಗೆ ಹರಿಬಿಟ್ಟ ಶಿವರಾಮೇಗೌಡ!

ಮಂಡ್ಯ; ಕುಮಾರಸ್ವಾಮಿಯವರನ್ನು ಬೈಯ್ಯುವ ಭರದಲ್ಲಿ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ನಾಲಗೆ ಹರಿಬಿಟ್ಟಿದ್ದಾರೆ.. ಮಂಡ್ಯ ಜನರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ.. ಮಂಡ್ಯ ಜನರೇ ಗಂಡಸರಾಗರಪ್ಪಾ, ಕೈಗೆ ಬಳೆ ತೊಟ್ಟುಕೊಳ್ಳಬೇಡಿ ಎಂದು ಹೇಳುವ ಮೂಲಕ ಶಿವರಾಮೇಗೌಡರ ಮಂಡ್ಯ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ..
ಕುಮಾರಸ್ವಾಮಿಯವರು ಮಂಡ್ಯದಲ್ಲಿ ಲೋಕಸಭೆಗೆ ಸ್ಪರ್ಧೆ ಮಾಡಿದ್ದ ವಿಚಾರದ ಬಗ್ಗೆ ಮಾತನಾಡಿದ ಎಲ್‌.ಆರ್‌.ಶಿವರಾಮೇಗೌಡ ಅವರು, ಅವರು ಯಾಕೆ ನಮ್ಮ ಜಿಲ್ಲೆಗೆ ಬರಬೇಕು.. ಸ್ಥಳೀಯ ನಾಯಕರು ಯಾರೂ ಇರಲಿಲ್ಲವೇ..?, ಮಂಡ್ಯ ಜನ ಯಾಕೆ ಹೊರಗಿನವರಿಗೆ ಮತ ಹಾಕಬೇಕಿತ್ತು..? ಎಂದು ಪ್ರಶ್ನೆ ಮಾಡಿದ್ದಾರೆ.. ಇದೇ ವೇಳೆ ಮಾತಿನ ಭರದಲ್ಲಿ ಮಂಡ್ಯ ಜಿಲ್ಲೆಯ ಜನತೆಗೆ ಕರೆ‌ ಕೊಡುತ್ತೇನೆ “ಗಂಡಸರಾಗ್ರಪ್ಪ, ಕೈಗೆ ಬಳೆ‌ ತೊಟ್ಟುಕೊಳ್ಳಬೇಡಿ” ಎಂದಿದ್ದಾರೆ.. ಇದು ಮಂಡ್ಯ ಜನರ ಕೆಂಗಣ್ಣಿಗೆ ಗುರಿಯಾಗಿದೆ..
ಇನ್ನು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿದ್ದ ಎಲ್‌.ಆರ್‌.ಶಿವರಾಮೇಗೌಡ ಅವರು ಈಗ ಕಾಂಗ್ರೆಸ್‌ ಸೇರುತ್ತಿದ್ದಾರಂತೆ.. ನಾನೂ ಕೂಡಾ ಯೋಗೇಶ್ವರ್‌ ರಂತೆ ಜಂಪಿಂಗ್‌ ಸ್ಟಾರ್‌ ಎಂದು ಅವರೇ ಹೇಳಿಕೊಂಡಿದ್ದಾರೆ..

Share Post