BengaluruTechTechnology

ಶೀಘ್ರದಲ್ಲೇ ಜನರನ್ನು ಹೊತ್ತೊಯ್ಯಲಿದೆ ಚಾಲಕ ರಹಿತ ಮೆಟ್ರೋ ರೈಲು!

ಬೆಂಗಳೂರು; ಚೀನಾದಿಂದ ತರಿಸಲಾಗಿದ್ದ ಚಾಲಕ ಮೆಟ್ರೋ ರೈಲು ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಾಗಲಿದೆ.. ಕೊನೆಯ ಹಂತದ ಟೆಸ್ಟಿಂಗ್‌ ನಡೆಯುತ್ತಿದ್ದು, ಇದರಲ್ಲಿ ಯಶಸ್ವಿಯಾದರೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ..  ಈಗ ಸಿಗ್ನಲಿಂಗ್ ವ್ಯವಸ್ಥೆ ಮತ್ತು ಇಂಟಿಗ್ರೇಷನ್ ಟೆಸ್ಟಿಂಗ್ ಅನ್ನು​ ಯೆಲ್ಲೋ ಲೈನ್​ನಲ್ಲಿ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ..

ಫೆಬ್ರವರಿ 20ರಂದು ಚೀನಾದಿಂದ ಆರು ಬೋಗಿಗಳುಳ್ಳ ಚಾಲಕ ರಹಿತ ರೈಲು ಹೆಬ್ಬಗೋಡಿ ಮೆಟ್ರೋ ಡಿಪೋಗೆ ಬಂದಿತ್ತು.. ಇದುವರೆಗೆ ಹಲವಾರು ರೀತಿಯಲ್ಲಿ ಟೆಸ್ಟಿಂಗ್‌ ಮಾಡಲಾಗಿದೆ.. ಒಟ್ಟು 37 ಟೆಸ್ಟಿಂಗ್​ಗೆ ಒಳಪಡಿಸಲಾಗುತ್ತದೆ.. ಸಿಗ್ನಲಿಂಗ್ ಟೆಸ್ಟ್ ಚಾಲಕ ರಹಿತ ರೈಲುಗಳ ಮುಖ್ಯ ಪರೀಕ್ಷೆಯ ಒಂದು ಭಾಗ ಎಂದು ಹೇಳಲಾಗಿದ್ದು, ಇದೀಗ ಆ ಪರೀಕ್ಷೆ ಮಾಡಲಾಗುತ್ತಿದೆ..

ಪ್ರಸ್ತುತ, ಕೋಚ್‌ಗಳು ಸ್ಟ್ಯಾಟಿಕ್ ಮತ್ತು ಎಲೆಕ್ಟ್ರಿಕಲ್ ಸರ್ಕ್ಯೂಟ್ ಪರೀಕ್ಷೆಗೆ ಒಳಗಾಗುತ್ತಿದ್ದು, ಶೀಘ್ರದಲ್ಲೇ, ಅವುಗಳನ್ನು ಮುಖ್ಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ..

ಸುಮಾರು 18.82 ಕಿಲೋಮೀಟರ್‌ ಉದ್ದ ಯೆಲ್ಲೋ ಲೈನ್ ಈ ವರ್ಷದ ಅಂತ್ಯದ ವೇಳೆಗೆ ಈ ಚಾಲಕ ರಹಿತ ಮೆಟ್ರೋ ರೈಲು ಸಂಚಾರ ಮಾಡಲಿದೆ ಎಂದು ತಿಳಿದುಬಂದಿದೆ..

 

Share Post