ಪತ್ನಿಯ ರುಂಡ ಚೆಂಡಾಡಿದ ಪಾಪಿ ಪತಿ; ಅಂಗಾಂಗಳ ಪೀಸ್ ಪೀಸ್ ಮಾಡಿ ಪೈಶಾಚಿಕ ಕೃತ್ಯ!
ತುಮಕೂರು; ಪತ್ನಿಯ ರುಂಡ ಚೆಂಡಾಡಿ, ದೇಹದ ವಿವಿಧ ಭಾಗಗಳನ್ನು ಕತ್ತರಿಸಿ ದಾರುಣವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.. ಇಲ್ಲಿ ಹುಲಿಯೂರುದುರ್ಗದ ಹೊಸಪೇಟೆಯಲ್ಲಿ ಈ ಕೃತ್ಯ ಎಸಗಲಾಗಿದೆ.. ಆರೋಪಿ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ..
32 ವರ್ಷ ಪುಷ್ಪ ಎಂಬಾಕೆಯೇ ಕೊಲೆಯಾದ ದುರ್ದೈವಿಯಾಗಿದ್ದಾಳೆ.. ಗಂಡ ಶಿವರಾಮ್ ಕಳೆದ ರಾತ್ರಿ ಪತ್ನಿಯ ಜೊತೆ ಜಗಳವಾಡಿದ್ದಾನೆ.. ಇದೇ ವೇಳೆ ಆತ ಮಚ್ಚಿನಿಂದ ಪತ್ನಿ ಪುಷ್ಪಳ ತಲೆಯನ್ನು ಕತ್ತರಿಸಿದ್ದಾನೆ.. ಅನಂತರ ಆಕೆ ಅಂಗಾಂಗಗಳನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾನೆ..
ಸುಗ್ಗನಹಳ್ಳಿ ಮೂಲದ ಆರೋಪಿ ಶಿವರಾಮ್, ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪುಷ್ಪಳನ್ನು ಮದುವೆಯಾಗಿದ್ದ.. ಇವರಿಗೆ ಎಂಟು ವರ್ಷದ ಮಗ ಕೂಡಾ ಇದ್ದಾನೆ.. ಇವರು ಹುಲಿಯೂರುದುರ್ಗದ ಹೊಸಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.. ಸಾಮಿಲ್ ಒಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ ಶಿವರಾಮ್ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜೊತೆ ಜಗಳ ತೆಗೆದಿದ್ದಾನೆ.. ಆಗಾಗ ಇಂತಹ ಜಗಳಗಳು ನಡೆಯುತ್ತಿದ್ದವು.. ರಾತ್ರಿ ಇದು ವಿಕೋಪಕ್ಕೆ ತಿರುಗಿದ್ದು, ಆರೋಪಿ ಶಿವರಾಮ್ ಪತ್ನಿ ಪುಷ್ಪಳನ್ನು ಭೀಕರವಾಗಿ ಕೊಂದಿದ್ದಾನೆ.. ಅಡುಗೆ ಮನೆಯಲ್ಲೇ ಪತ್ನಿಯ ಕತ್ತು ಹಾಗೂ ದೇಹದ ಅಂಗಾಂಗ ಕತ್ತರಿಸಿ ಕೊಲೆ ಮಾಡಿದ್ದಾನೆ.
ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ..