CrimeNational

ಎರಡು ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರು ಯೂಟ್ಯೂಬರ್‌ಗಳ ದುರ್ಮರಣ!

ಲಖನೌ; ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ನಾಲ್ವರು ಯೂಟ್ಯೂಬರ್‌ಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ.. ಉತ್ತರ ಪ್ರದೇಶದ ಅಮ್ರೊಹಾ ಜಿಲ್ಲೆಯ ಗಜ್ರೌಲ್‌ ಬಳಿ ಈ ದುರಂತ ನಡೆದಿದೆ..

ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ.. ಶಾರುಖ್, ಸಲ್ಮಾನ್‌, ಶಹ್ನವಾಜ್‌ ಹಾಗೂ ಲಕ್ಕಿ ಎಂಬುವವರೇ ಅಪಘಾತದಲ್ಲಿ ಮೃತಪಟ್ಟ ಯೂಟ್ಯೂಬರ್‌ಗಳು ಎಂದು ಗೊತ್ತಾಗಿದೆ.. ಇನ್ನು ಇದೇ ಅಪಘಾತದಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ…

ಮೃತ ನಾಲ್ವರು ಯುವಕರೂ ಕೂಡಾ ಒಂದು ಯೂಟ್ಯೂಬ್‌ ಚಾನೆಲ್‌ ಒಂದನ್ನು ನಡೆಸುತ್ತಿದ್ದರು.. ಕಾಮಿಡಿ ವಿಡಿಯೋಗಳನ್ನು ಮಾಡುತ್ತಿದ್ದ ಇವರು ಸಾಕಷ್ಟು ಹೆಸರು ಮಾಡಿದ್ದರು.. ಈ ನಾಲ್ವರೂ ಸ್ನೇಹಿತರೊಬ್ಬರು ಹುಟ್ಟುಹಬ್ಬದ ಆಚರಣೆಗೆಂದು ಕಾರಿನಲ್ಲಿ ಹೋಗುತ್ತಿದ್ದಾಗ, ಎದುರಿಗೆ ಬಂದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ..

 

Share Post