National

ಜಮ್ಮುನಲ್ಲಿ ಉಗ್ರರ ಅಡಗುದಾಣ ಪತ್ತೆ; 23 ಗ್ರೆನೇಡ್‌ ವಶ

ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಪೊಲೀಸರು ಹಾಗೂ ಭಾರತೀಯ ಯೋಧರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.ಜಂದ್‌ ಫರಾನ್‌ ಎಂಬಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಉಗ್ರರ ಅಡಗುದಾಣ ಪತ್ತೆಯಾಗಿದೆ. ಇಲ್ಲಿ ಅಪಾರ ಪ್ರಮಾಣದ ಗ್ರೆನೇಡ್‌ಗಳು ಪ್ತತ್ತೆಯಾಗಿವೆ.

ಶೋಧ ಕಾರ್ಯಾಚರಣೆ ವೇಳೆ ಈ ಉಗ್ರರ ಅಡಗುದಾಣ ಪತ್ತೆಯಾಗಿದೆ. ಈ ವೇಳೆ ಒಟ್ಟು 23 ಗ್ರೆನೇಡ್‌ಗಳು ಸಿಕ್ಕಿವೆ. ಹನ್ನೊಂದು ಹ್ಯಾಂಡ್‌ಗ್ರೆನೇಡ್‌ಗಳು, ಹನ್ನೊಂದು UGGL ಗ್ರೆನೇಡ್‌ಗಳು ಹಾಗೂ ಒಂದು ಕಚ್ಚಾ ಗ್ರೆನೇಡ್‌ ಅನ್ನು ಪೊಲೀಸರು ಹಾಗೂ ಸೇನೆ ವಶಪಡಿಸಿಕೊಂಡಿದೆ.

ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್‌ಗಳ ಅಡಿಯಲ್ಲಿ  ಶೀರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ.

Share Post