ಸ್ವಂತ ಮಗಳನ್ನೇ ಕೊಚ್ಚಿ ಕೊಂದ ಪಾಪಿ ಅಪ್ಪ; ಖಿನ್ನತೆ ಇಷ್ಟೊಂದು ಕೆಲಸ ಮಾಡಿಸುತ್ತಾ..?
ಆಲಪ್ಪುಳ; ಪಾಪಿ ಅಪ್ಪನೊಬ್ಬ ಸ್ವಂತ ಮಗಳನ್ನೇ ಕೊಡಲಿಯಿಂದ ಕಡಿದು ಕೊಂದಿರುವ ಪೈಶಾಚಿಕ ಕೃತ್ಯ ಕೇರಳದ ಆಲಪ್ಪುಳದಲ್ಲಿ ನಡೆದಿದೆ. ನಕ್ಷತ್ರ ಎಂಬ ಬಾಲಕಿಯೇ ಅಪ್ಪನ ಕೈಯಲ್ಲೇ ಕೊಲೆಯಾದ ದುರ್ದೈವಿ. ಆರೋಪಿಯನ್ನು ಆಲಪ್ಪುಳದ ಪುನ್ನಮೂಡು, ಮಾವೇಲಿಕ್ಕರ ಮೂಲದ ಶ್ರೀಮಹೇಶ್ ಎಂದು ಗುರುತಿಸಲಾಗಿದೆ.
ಶ್ರೀಮಹೇಶ್ ಅವರ ಪತ್ನಿ ನಾಲ್ಕು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಶ್ರೀಮಹೇಶ್, ಚಿಕಿತ್ಸೆ ಕೂಡಾ ಪಡೆಯುತ್ತಿದ್ದ. ಆದ್ರೆ ಅದೇನಾಯ್ತೋ ಏನೋ ಶ್ರೀಮಹೇಶ್ ತನ್ನ ಸ್ವಂತ ಮಗಳ ಮೇಲೇ ಯಮನಂತೆ ದಾಳಿ ಮಾಡಿದ್ದಾನೆ. ಕೊಡಲಿಯಿಂದ ಕಡಿದು ಕೊಂದಿದ್ದಾನೆ. ನಕ್ಷತ್ರಾ ಕಿರುಚಾಡುತ್ತಿದ್ದುದನ್ನು ನೋಡಿ, ಶ್ರೀಮಹೇಶ್ ತಾಯಿ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಆಕೆಯ ಮೇಲೂ ಶ್ರೀ ಮಹೇಶ್ ದಾಳಿ ಮಾಡಿದ್ದಾನೆ. 62 ವರ್ಷದ ತಾಯಿ ಸುನಂದಾಳ ತಲೆ ಹಾಗೂ ಕುತ್ತಿಗೆಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.