National

ಪ್ರಧಾನಿ ಸ್ವೀಕರಿಸಿರುವ ಉಡುಗೊರೆಗಳ ಆನ್‌ಲೈನ್‌ ಹರಾಜು

ನವದೆಹಲಿ; ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ಸಮಾರಂಭಗಳಲ್ಲಿ ಸ್ವೀಕಾರ ಮಾಡಿರುವ ಸ್ಮರಣಿಕೆ ಹಾಗೂ ಉಡುಗೊರೆಗಳನ್ನು ಹರಾಜು ಮಾಡಲಾಗುತ್ತಿದೆ. ಆನ್‌ಲೈನ್‌ ಮೂಲಕ ಅಕ್ಟೋಬರ್‌ 31ರವರೆಗೆ ಹರಾಜು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಹಲವು ಶಿಲ್ಪಗಳು, ವರ್ಣಚಿತ್ರಗಳು, ರೇಖಾಚಿತ್ರಗಳು, ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಉಡುಗೆಗಳು, ಪೇಟಾ ಸೇರಿದಂತೆ ಹಲವಾರು ಬಗೆಯ ಉಡುಗೊರೆಗಳನ್ನು ಹರಾಜು ಮೂಲಕ ಪಡೆದುಕೊಳ್ಳಬಹುದು.

ಬೆಲೆ 700 ರೂ.ನಿಂದ ಶುರುವಾಗಿ 64,80,000 ರೂಪಾಯಿಯವರೆಗೂ ಇದೆ. ಆನ್​​ಲೈನ್​ ಮೂಲಕ PM Mementos ಪೋರ್ಟಲ್​​ ನಲ್ಲಿ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಆನ್‌ಲೈನ್‌ ಮೂಲಕ ಹರಾಜಿನಲ್ಲಿ ಪಾಲ್ಗೊಂಡು ಯಾವುದಾದರೂ ವಸ್ತು ಖರೀದಿ ಮಾಡಿದರೆ, ಕೇಂದ್ರ ಸರ್ಕಾರವೇ ಅದನ್ನು ಅವರ ಮನೆಗೆ ತಲುಪಿಸುತ್ತದೆ ಎಂದು ತಿಳಿದುಬಂದಿದೆ.

Share Post