CrimeDistricts

ಮಂಗಳೂರಲ್ಲಿ ರಸ್ತೆಯಲ್ಲೇ ಪಲ್ಟಿ ಹೊಡೆಯಿತು ಗ್ಯಾಸ್‌ ಟ್ಯಾಂಕರ್‌; ಜನರಲ್ಲಿ ಆತಂಕ!

ಮಂಗಳೂರು;‌ ಮಂಗಳೂರು ಬಳಿ ರಸ್ತೆ ಮಧ್ಯೆ ಗ್ಯಾಸ್‌ ಟ್ಯಾಂಕರ್‌ ಪಲ್ಟಿ ಹೊಡೆದಿದೆ.. ರಸ್ತೆ ನಡುವೆಯೇ ಟ್ಯಾಂಕರ್‌ ಉರುಳಿಬಿದ್ದಿದ್ದು, ಟ್ಯಾಂಕರ್‌ನಿಂದ ಗ್ಯಾಸ್‌ ಲೀಕ್‌ ಆಗುವ ಭೀತಿ ಇತ್ತು.. ಆದ್ರೆ ಟ್ಯಾಂಕರ್‌ಗೆ ಯಾವುದೇ ಹಾನಿಯಾಗಿಲ್ಲ.. ಹೀಗಾಗಿ ಜನರು ನಿಟ್ಟುಸಿರುಬಿಟ್ಟಿದ್ದಾರೆ.. 

ಬಂಟ್ವಾಳದ ರಾಷ್ಟ್ರೀಯ ಹೆದ್ದಾರಿ 75ರ ತುಂಬೆ ಸಮೀಪದ ಕಡೆಗೋಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್‌ ಪಲ್ಟಿಯಾಗಿದೆ ಎಂದು ಗೊತ್ತಾಗಿದೆ.. ಗ್ಯಾಸ್‌ ಟ್ಯಾಂಕರ್‌ ಚಾಲಕ ಪ್ರಾಣಾಪಾದಿಂದ ಪಾರಾಗಿದ್ದಾರೆ.. ಟ್ಯಾಂಕರ್‌ ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದಿರುವುದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.. ಬೆಳಗ್ಗೆ ಈ ಭಾಗದಲ್ಲಿ ಕೆಲಸಕಾರ್ಯಗಳಿಗಾಗಿ ಓಡಾಡುವವರಿಗೆ ಕಷ್ಟವಾಗಿದೆ..

ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯರಿಂದ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತು.. ಟ್ಯಾಂಕರ್‌ ತೆರವು ಮಾಡುವ ಕೆಲಸ ನಡೆಯುತ್ತಿದೆ..

 

Share Post