Crime

ಕೆಲಸಗಾರರು ಬೇಕಾಗಿದ್ದಾರೆ ಎಂಬ ಬೋರ್ಡ್‌ ಹಿಡಿದು ನಿಂತ ಕಾಫಿ ಬೆಳೆಗಾರ!

ಮಡಿಕೇರಿ; ಹೊಸ, ತೋಟದ ಕೆಲಸ ಮಾಡಲು ಕಾರ್ಮಿಕರು ಸಿಗದೇ ರೈತರು ಪರದಾಡುತ್ತಿರುವುದು ಗೊತ್ತಿರುವ ವಿಚಾರವೇ. ಅದೇ ರೀತಿ ಕೊಡಗಿನ ಕಾಫಿ ಬೆಳೆಗಾರರು ಕೂಡಾ ಕಾರ್ಮಿಕರ ಕೊರೆತೆ ಎದುರಿಸುತ್ತಿದ್ದಾರೆ. ಇದರಿಂದ ಬೇಸತ್ತ ಕಾಫಿ ಬೆಳೆಗಾರರೊಬ್ಬರು ರಸ್ತೆ ಬದಿ ಕೆಲಸಗಾರರು ಬೇಕಾಗಿದ್ದಾರೆ ಎಂಬ ಬೋರ್ಡ್‌ ಹಿಡಿದು ನಿಂತಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.

ಈ ಕಾಫಿ ಹಣ್ಣಾಗುವ ಸಮಯ. ಹೀಗಾಗಿ ಕಾಫಿ ಹಣ್ಣು ಕೀಳುವುದಕ್ಕೆ ಕಾರ್ಮಿಕರ ಅವಶ್ಯಕತೆ ಇದೆ. ಅಧಿಕ ಸಂಬಳ ನೀಡುತ್ತೇವೆಂದರೂ ಬರುವವರಿಲ್ಲ. ಇದರಿಂದಾಗಿ ಕಾಫಿ ಬೆಳೆಗಾರರು ಪರದಾಡುತ್ತಿದ್ದಾರೆ. ಹೀಗಾಗಿ ಕಾಫಿ ಬೆಳೆಗಾರರೊಬ್ಬರು ರಸ್ತೆ ಬದಿ ಬೋರ್ಡ್‌ ಹಿಡಿದಿದ್ದು, ಕೆಲಸಗಾರರು ಬೇಕಾಗಿದ್ದಾರೆ ಎಂದು ಅದರಲ್ಲಿ ಬರೆದುಕೊಂಡಿದ್ದಾರೆ. ಪುರುಷರಿಗೆ ದಿನಕ್ಕೆ 615 ರೂಪಾಯಿ, ಮಹಿಳೆಯರಿಗೆ ದಿನಕ್ಕೆ 415 ರೂಪಾಯಿ ನೀಡೋದಾಗಿಯೂ ಅದರಲ್ಲಿ ಬರೆದುಕೊಂಡಿದ್ದಾರೆ.

ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ದುಡಿದರೆ ಅದಕ್ಕೆ ಹೆಚ್ಚಿನ ಹಣ ನೀಡೋದಾಗಿಯೂ ಆ ಬೋರ್ಡ್‌ನಲ್ಲಿ ಬರೆಯಲಾಗಿದೆ.

 

Share Post