CrimeDistricts

ಬೈಕ್‌ಗೆ ಡಿಕ್ಕಿ ಹೊಡೆದ ಕಾರು!; 10 ಅಡಿ ಎತ್ತರಕ್ಕೆ ಹಾರಿದ ಸವಾರರು!

ಬೀದರ್; ಬೈಕ್‌ಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದು, ಬೈಕ್‌ ಸವಾರರಿಬ್ಬರೂ ಹತ್ತು ಅಡಿ ಮೇಲಕ್ಕೆ ಹಾರಿದ್ದಾರೆ.. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯ ನೋಡಲು ಭಯಾನಕವಾಗಿದೆ.. ಬೀದರ್‌ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಕ್ರಾಸ್‌ ಬಳಿ ಈ ಭೀಕರ ಘಟನೆ ನಡೆದಿದೆ..
NH-65 ಮುಂಬೈ ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ನಿರ್ಣಾ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ.. ಘಟನೆಯಲ್ಲಿ ಉಡಬಾಳ ಗ್ರಾಮದ ಸತೀಶ್‌ ಶಿವಕುಮಾರ್‌ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.. ಕಾರು ಹೈದರಾಬಾದ್‌ನಿಂದ ಮಹಾರಾಷ್ಟ್ರಕ್ಕೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ.. ಮನ್ನಾಖೇಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Share Post