CrimeNational

ಪಂಚತಾರಾ ಹೋಟೆಲ್‌ಗೆ ಬಾಂಬ್‌ ಬೆದರಿಕೆ ಕರೆ

ಚಂಡೀಗಢ; ಪಂಚತಾರಾ ಹೋಟೆಲ್‌ ಒಂದಕ್ಕೆ ಬಾಂಬ್ ಬೆದರಿಕೆ  ಬಂದಿದೆ. ಹರಿಯಾಣದ ಗುರುಗ್ರಾಮದ ಆಂಬಿಯನ್ಸ್‌ ಮಾಲ್‌ ಕಾಂಪ್ಲೆಕ್ಸ್‌ನ ಲೀಲಾ ಹೋಟೆಲ್‌ಗೆ ಕರೆ ಬಂದಿದ್ದು, ಪೊಲೀಸರು ತೀವ್ರ ಶೋಧ ನಡೆಸಿದರು.

ಬೆಳಗ್ಗೆ 11:35ಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಇದರಿಂದಾಗಿ ಹೋಟೆಲ್‌ನಲ್ಲಿದ್ದವರು ಭೀತಿಗೊಳಗಾಗಿದ್ದರು. ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.  ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿತು.

ಇದೀಗ ಬೆದರಿಕೆ ಬಂದಿರುವ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ.

Share Post