Districts

ಜಗ್ಗೇಶ್ ಅಭಿಮಾನಿಗಳಿಂದ ಅಪ್ಪು ಹೆಸರಲ್ಲಿ ವೃದ್ಧೆಗೆ ಸೂರು

ತುಮಕೂರು: ನವರಸ ನಾಯಕ ಜಗ್ಗೇಶ್ ಅಭಿಮಾನಿಗಳು ಅಪ್ಪು ಅವರ ಹೆಸರಲ್ಲಿ ವೃದ್ಧೆಗೆ ಮನೆಯೊಂದನ್ನು ಕಟ್ಟಿಕೊಟ್ಟಿದ್ದಾರೆ.

ಕನ್ನಡಿಗರ ಕಣ್ಮಣಿ, ಪುನೀತ್ ರಾಜ್‍ಕುಮಾರ್ ಮೇಲಿನ ಅಭಿಮಾನ ನಿರಂತರವಾಗಿ ವಿವಿಧ ಆಯಾಮದಲ್ಲಿ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರರಂಗದ ಎಲ್ಲ ನಾಯಕ ನಟರ ಅಭಿಮಾನಿಗಳು ಅಪ್ಪು ಅಗಲಿಕೆಗೆ ಕಂಬನಿ ಮಿಡಿದಿದ್ದು ನಮ್ಮ ಕಣ್ಣ ಮುಂದೆ ಇದೆ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಜಗ್ಗೇಶ್ ಅವರ ಅಭಿಮಾನಿಗಳು ಪುನೀತ್ ಅವರ ಹೆಸರಲ್ಲಿ ಅನಾಥ ವೃದ್ಧೆಗೆ ಸೂರೊಂದನ್ನು ಕಲ್ಪಿಸಿ ಕೊಟ್ಟು ಅಪ್ಪು ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಪ್ರಯತ್ನ ಮಾಡಿದ್ದಾರೆ.

Share Post