BengaluruCrime

ವಾಲಿದ ಮತ್ತೊಂದು ಬಹುಮಹಡಿ ಕಟ್ಟಡ; ಜನರಲ್ಲಿ ಆತಂಕ!

ಬೆಂಗಳೂರು; ಮೊನ್ನೆಯಷ್ಟೇ ಬೆಂಗಳೂರಿನ ಬಾಬುಸಾಬ್‌ ಪಾಳ್ಯದಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದುಬಿದ್ದು ಎಂಟು ಕಾರ್ಮಿಕರು ಸಾವನ್ನಪ್ಪಿದ್ದರು.. ಇನ್ನೂ ಕಾರ್ಯಾಚರಣೆ ಮುಂದುವರೆದಿದೆ.. ಹೀಗಿರುವಾಗಲೇ ಬೆಂಗಳೂರಿನಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ವಾಲಿದ್ದು, ಆತಂಕಕ್ಕೆ ಕಾರಣವಾಗಿದೆ..
ಬೆಂಗಳೂರಿನ ಹೊರಮಾವುನಲ್ಲಿರುವ ನಂಜಪ್ಪ ಗಾರ್ಡನ್‌ನಲ್ಲಿರುವ ಕಟ್ಟಡವೊಂದು ಪಕ್ಕಕ್ಕೆ ವಾಲಿದೆ.. ಯಾವಾಗ ಬೀಳುತ್ತೋ ಎಂಬ ಆತಂಕದಲ್ಲಿ ಸುತ್ತಮುತ್ತಲಿನ ಜನರಿದ್ದಾರೆ.. ಸುಮಾರು ಆರು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಇದಾಗಿದೆ.. ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭೂಮಿ ಸಡಿಲವಾಗಿ ಕಟ್ಟಡ ಪಕ್ಕಕ್ಕೆ ವಾಲಿದೆ..
ಬಿಬಿಎಂಪಿ ಅಧಿಕಾರಿ ಕಟ್ಟಡವನ್ನು ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ..

Share Post