ಮಾಹಿತಿ ಕೊರತೆ; ನಂದಿ ಬೆಟ್ಟದತ್ತ ನೂರಾರು ಪ್ರವಾಸಿಗರು..!
ಚಿಕ್ಕಬಳ್ಳಾಪುರ: ಹೊಸ ವರ್ಷಾಷಚರಣೆ ನಂದಿ ಬೆಟ್ಟದಲ್ಲಿ ಆಚರಿಸಲು ನಿಷೇಧ ಹೇರಲಾಗಿದೆ. ಈ ವಿಚಾರವನ್ನು ಮಾಧ್ಯಮಗಳ ಮೂಲಕ ತಿಳಿಸಿದ್ದರೂ, ಈಗಲೂ ಪ್ರವಾಸಿಗರು ನಂದಿ ಬೆಟ್ಟದತ್ತ ಬರುತ್ತಿದ್ದಾರೆ. ಹೊಸ ವರ್ಷಾಚರಣೆಗೆ ನಂದಿ ಬೆಟ್ಟಕ್ಕೆ ಬರುತ್ತಿರುವ ಪ್ರವಾಸಿಗರನ್ನು, ದಾರಿ ಮಧ್ಯೆಯೇ ಪೊಲೀಸರು ಅಡ್ಡಹಾಕಿ ವಾಪಸ್ ಕಳುಹಿಸುತ್ತಿದ್ದಾರೆ.
ನಂದಿಬೆಟ್ಟಕ್ಕೆ ನಿಷೇಧವಿದೆ ಎಂದು ತಿಳಿಯದೇ ನೂರಾರು ಪ್ರವಾಸಿಗರು ಇಂದು ನಂದಿ ಬೆಟ್ಟದತ್ತ ಆಗಮಿಸಿದ್ದರು. ಆದರೆ ಅವರಿಗೆ ಪ್ರವೇಶ ನಿರಾಕರಿಸಲಾಯಿತು. ಹೀಗಾಗಿ ಅವರು ನಿರಾಸೆಯಿಂದ ಹಿಂತಿರುಗಿದರು. ಕೊವಿಡ್ ಕಾರಣದಿಂದಾಗಿ ವೀಕೆಂಡ್‌ಗಳಲ್ಲಿ ಹಾಗೂ ಡಿಸೆಂಬರ್ ೩೧ರಿಂದ ಜನವರಿ ೨ರವರೆಗೆ ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿದೆ.