CrimeNational

ಈತ ಗುರುವಲ್ಲ…ಕಾಮ ಪಿಪಾಸು: ಮೂರನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಿನ್ಸಿಪಾಲ್‌ ಅರೆಸ್ಟ್

ಉತ್ತರಪ್ರದೇಶ: ಗುರ ದೇವೋಭವ…ಶಿಕ್ಷಕರನ್ನು ದೇವರಿಗೆ ಹೋಲಿಸುತ್ತಾರೆ. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಲ್ಲಾ ಹಕ್ಕನ್ನು ಪೋಕರು ಗುರುಗಳಿಗೆ ನೀಡುತ್ತಾರೆ. ಗುರುಗಳು ಶಿಕ್ಷೆ ಕೊಟ್ಟರೂ ಹೆತ್ತವರು ಯಾಕೆಂದು ಪ್ರಶ್ನೆ ಮಾಡುವುದಿಲ್ಲ. ಆದರೆ ಅಂತಹ ಗುರು ಸ್ಥಾನದಲ್ಲಿರುವವನು ರಾಕ್ಷಸನಂತೆ ಮೂರನೇ ತರಗತಿ ವಿದ್ಯಾರ್ಥಿನಿ ಮೇಲೆ ಎರಗಿದ್ದಾನೆ. ಇದೀಗ ಪ್ರಾಂಶುಪಾಲನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿರುವ ಶಾಲೆಯೊಂದರಲ್ಲಿ 71ವರ್ಷದ ಮುದಿ ಪ್ರಾಂಶುಪಾಲ ಬಂಭತ್ತನೇ ವಯ್ಯಸ್ಸು ಅಂದರೆ ತನ್ನ ಮೊಮ್ಮಗಳ ವಯಸ್ಸು ಇರಬಹುದು..ಅಂತಹ ಮಗುವನ್ನು ಕೊಠಡಿಗೆ ಕರೆದೊಯ್ದು ಬಟ್ಟೆ ಬಿಚ್ಚಿಸಿ ಅತ್ಯಾಚಾರ ಮಾಡಿದ್ದಾನೆ. ಏನೂ ಅರಿಯದ ಬಾಲಕಿ ರಕ್ತಸ್ರಾವದಿಂದ ಬಳಲುತ್ತಾ ಮನೆಗೆ ಬಂದು ನೋವಾಗುತ್ತಿದೆ ಎಂದು ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ವೈದ್ಯರ ಬಳಿ ಕರೆದೊಯ್ದು ಪರೀಕ್ಷಿಸಿದಾಗ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಬಾಲಕಿ ತಂದೆ ಪ್ರಾಂಶುಪಾಲ ಹಾಗೂ ಅಪರಾಧವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಶಿಕ್ಷಕನ ವಿರುದ್ಧ ದೂರು ದಾಖಲಾಗಿದೆ. ವೈದ್ಯರ ಪರೀಕ್ಷಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ವರದಿ ಬಂದ ಕೂಡಲೇ ಮುದಿ ಕಾಮುಕ ಪ್ರಾಂಶುಪಾಲನ ವಿರುದ್ಧ ಐಪಿಸಿ ಸೆಕ್ಷನ್‌ 376ಅತ್ಯಾಚಾರ ಪ್ರಕರಣ ಮತ್ತು ಲೈಂಗಿಕ ದೌರ್ಜನ್ಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲು ಪೊಲೀಸರು ಕಾಯುತ್ತಿದ್ದಾರೆ.

Share Post