ಐವರು ವ್ಯಕ್ತಿಗಳು ಅನುಮಾನಾಸ್ಪದ ಸಾವು; ಮದ್ಯ ಕಾರಣವಾ..?
ಪಾಟ್ನಾ: ಬಿಹಾರದ ಮೇಕರ್ ಮತ್ತು ಅಮ್ನೂರ್ ಪ್ರಾಂತ್ಯದಲ್ಲಿ ಐವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಬೇರೆ ಬೇರೆ ಕಡೆ ಐದು ಮಂದಿಯ ಮೃತದೇಗಳು ಪತ್ತೆಯಾಗಿವೆ. ಎಲ್ಲರೂ ಯಾಕೆ ಮೃತಪಟ್ಟರು ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಆದರೆ ಒಂದೇ ದಿನ ಐವರು ಮೃತಪಟ್ಟಿರುವುದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಸ್ಥಳೀಯರು ಹೇಳುವ ಪ್ರಕಾರ ನಕಲಿ ಮದ್ಯ ಸೇವನೆಯೇ ಇದಕ್ಕೆ ಕಾರಣವಂತೆ. ಮೃತರ ಕುಟುಂಬದವರು ಕೂಡಾ ಇದೇ ವಾದ ಮಾಡುತ್ತಿದ್ದಾರೆ. ಆದ್ರೆ ತನಿಖೆಯಿಂದಷ್ಟೇ ನಿಜ ವಿಷಯ ಬಯಲಿಗೆ ಬರೋದು. ಈ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ. ಘಟನೆಗೆ ಕಾರಣ ಹುಡುಕುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ನಂತರ ಘಟನೆ ಕಾರಣ ತಿಳಿಯಲಿದೆ. : ರಾಜೇಶ್ ಮೀನಾ, ಡಿಎಂ ಸರಣ್