CrimeDistricts

ಮನೆಯ ಮೇಲ್ಛಾವಣಿ ಕುಸಿದು ಖಾಸಗಿ ಶಾಲೆ ಶಿಕ್ಷಕಿ ಸ್ಥಳದಲ್ಲೇ ಸಾವು!

ಕಲಬುರಗಿ; ಮನೆಯ ಮುಂದೆ ಕುಳಿತಿದ್ದ ಖಾಸಗಿ ಶಾಲಾ ಶಿಕ್ಷಕಿ ಮೇಲೆ ಮನೆಯ ಮೇಲ್ಛಾವಣಿ ಕುಸಿದಿದ್ದು, ಶಿಕ್ಷಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.. ಕಮಲಾಪುರ ತಾಲೂಕಿನ ‌ಮಹಾಗಾಂವ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ.. 35 ವರ್ಷದ ಅನಿತಾ ಮಠಪತಿ ಎಂಬ ಶಿಕ್ಷಕಿ ಸಾವನ್ನಪ್ಪಿದ್ದಾರೆ..

ಮೃತ ಶಿಕ್ಷಕಿ ಅನಿತಾ ಮಠಪತಿ ಅವರು ಸಿದ್ದಭಾರತಿ ವಿದ್ಯಾಮಂದಿರದಲ್ಲಿ ಕೆಲಸ ಮಾಡುತ್ತಿದ್ದರು.. ನಿನ್ನೆ ಕಾರ್ಯಕ್ರಮವೊಂದಕ್ಕೆ ಹೋಗಿ ಬಂದಿದ್ದರು.. ಇದೇ ವೇಳೆ ಮನೆಯ ಬಳಿ ಕುಳಿತಿದ್ದ ಅವರು, ಮಗನಿಗೆ ಮನೆಯೊಳಗಿಂದ ಮೊಬೈಲ್‌ ತರಲು ಹೇಳಿದ್ದಾರೆ.. ಇದೇ ಸಮಯಕ್ಕೆ ಸರಿಯಾಗಿ ಮನೆ ಮೇಲ್ಛಾವಣಿ ಕುಸಿದಿದೆ..

ಅದೃಷ್ಟವಶಾತ್‌ ಶಿಕ್ಷಕಿ ಮಗ ಬಚಾವ್‌ ಆಗಿದ್ದಾನೆ.. ಶಿಕ್ಷಕಿ ಅನಿತಾ ಮಠಪತಿ ಸಾವನ್ನಪ್ಪಿದ್ದಾರೆ..

 

Share Post