Health

ರಾಜ್ಯದಲ್ಲಿಂದು 47,754 ಮಂದಿಗೆ ಕೊರೊನಾ; 29 ಮಂದಿ ಬಲಿ..!

ಬೆಂಗಳೂರು:  ರಾಜ್ಯದಲ್ಲಿ ಇಂದು ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಜಾಸ್ತಿಯಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 47,754 ಕೊರೊನಾ ಬಂದಿದೆ. ಇಂದು ಒಟ್ಟು 29 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು  30,540 ಮಂದಿಗೆ ಕೊರೊನಾ ದೃಢಪಟ್ಟಿದೆ.

ರಾಜ್ಯದಲ್ಲಿ ಇಂದು 22,143 ಮಂದಿ ಗುಣಮುಖರಾಗಿದ್ದಾರೆ. ಇದ್ರಲ್ಲಿ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನು ಕೆಲವರು ಮನೆಯಲ್ಲೇ ಐಸೋಲೇಷನ್‌ನಲ್ಲಿದ್ದರು. ಇವತ್ತು ಒಟ್ಟು 2,58,290 ಮಂದಿಗೆ ಕೊವಿಡ್ ಪರೀಕ್ಷೆ‌ ನಡೆಸಲಾಗಿದ್ದು ಪಾಸಿಟಿವಿ ರೇಟ್‌ 18.48ಕ್ಕೇರಿದೆ. ಸದ್ಯ ರಾಜ್ಯದಲ್ಲಿ 2,93,231 ಸಕ್ರಿಯ ಪ್ರಕರಣಗಳಿವೆ.

ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ. ಇನ್ನು ವೀಕೆಂಡ್‌ ಕರ್ಫ್ಯೂ ಮುಂದುವರೆಸಬೇಕೋ, ಬೇಡವೋ ಎಂಬುದರ ಬಗ್ಗೆ ನಾಳೆ ಮಧ್ಯಾಹ್ನ ನಡೆಯುವ ಸಭೆ ಬಳಿಕ ತೀರ್ಮಾನಿಸಲಾಗುತ್ತದೆ.

Share Post