ಕಾಡಾನೆಯಿಂದ ದಾಳಿಗೊಳಗಾದ ಮನೆಗೆ ಭೇಟಿ ನೀಡಿದ ಶಾಸಕ ಹೆಚ್.ಕೆ. ಕುಮಾರಸ್ವಾಮಿ
ಸಕಲೇಶಪುರ; ಕಳೆದ ಎರಡು ದಿನಗಳ ಹಿಂದೆ ಒಂಟಿ ಕಾಡಾನೆ(ಮಕನ) ತಾಲೂಕಿನ ಬಾಳುಪೇಟೆಯ ಹಸುಗವಳ್ಳಿ ( ಕೊಪ್ಪಲು) ಗ್ರಾಮದ ಧರ್ಮ ಪ್ರಕಾಶ್ ಎಂಬುವರ ಮನೆಗೆ ದಾಳಿ ನಡೆಸಿ ಧ್ವಂಸಗೊಳಿಸಿದ ಮನೆಗೆ ಶಾಸಕ ಎಚ್ ಕೆ ಕುಮಾರಸ್ವಾಮಿ ಮಂಗಳವಾರ ಮುಂಜಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಾಡಾನೆಗಳ ಉಪಟಳ ತಾಲೂಕಿನ ಎಲ್ಲೆಡೆ ಮಿತಿಮೀರಿದು ಸರ್ಕಾರ ಕೇವಲ ಭರವಸೆಗಳನ್ನು ನೀಡಿದರೆ ಸಾಲದು ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.
ಹಳೆ DFO ವರ್ಗಾವಣೆಯಾಗಿದ್ದಾರೆ ಇದೀಗ ಹೊಸಬರು ಬಂದಿದ್ದಾರೆ ಯಾರೇ ಬಂದರೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಬೇಕು ಎಂದು ಒತ್ತಾಯಿಸಿದರು.
ಹಾನಿಗೊಳಗಾಗಿರುವ ಮನೆಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ರಾತ್ರಿ ವೇಳೆ ಉಪಟಳ ನೀಡುತ್ತಿರುವ ಒಂಟಿ ಕಾಡನೆ ಕಳೆದು ಒಂದು ವಾರದಿಂದ ಈ ಭಾಗದಲ್ಲಿ ಬೀಡು ಬಿಟ್ಟಿದ್ದು ಸಾರ್ವಜನಿಕರು ಭಯ ಬೀತರಾಗಿದ್ದಾರೆ ಆದ್ದರಿಂದ ಕೂಡಲೇ ಈ ಉಪಟಳ ನೀಡುತ್ತಿರುವ ಮಕ್ನ ಆನೆಯನ್ನು ಸೆರೆ ಹಿಡಿಯುವಂತೆ ಈ ವೇಳೆ ಆಗ್ರಹಿಸಿದರು.
ಒಂಟಿ ಕಾಡಾನೆಯಿಂದ ಬೆಳೆ ನಾಶ, ಮನೆ ದ್ವಂಸ ಹಾಗೂ ಪ್ರಾಣ ಭೀತಿಯು ಹೆಚ್ಚಾಗಿದ್ದು ಈ ವಿಚಾರವಾಗಿ ಇಂದು ಬೆಂಗಳೂರಿಗೆ ತೆರಳುತ್ತಿದ್ದು ಮುಖ್ಯಮಂತ್ರಿ ಹಾಗೂ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸುತ್ತೇನೆ ಎಂದರು.
ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ ಈ ಸಭೆಗೆ ಯಾವುದೇ ಜನಪ್ರತಿನಿಧಿಗಳನ್ನು ಕರೆಯದೆ ಸಭೆ ನಡೆಸುವುದರಿಂದ ಯಾವ ಪ್ರಯೋಜನವಿದೆ ಎಂದು ಅಸಮಾಧಾನ ಹೊರಹಾಕಿದರು.