Politics

ʻಬಿಜೆಪಿಯೇ ಅಧಿಕಾರ ಹಿಡಿಯುತ್ತೆ, ಆದ್ರೆ ಮಿತ್ರಪಕ್ಷಗಳ ಬೆಂಬಲ ಬೇಕೇಬೇಕು!ʼ; ಯೋಗೇಂದ್ರ ಯಾದವ್‌

ನವದೆಹಲಿ; ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯೋದು ಬಹುತೇಕ ಪಕ್ಕಾ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.. ಆದ್ರೆ ಯಾವ ಪಕ್ಷ ಎಷ್ಟು ಸೀಟು ಗೆಲ್ಲುತ್ತೆ ಅನ್ನೋದು ಮಾತ್ರ ಈಗ ಕುತೂಹಲದ ವಿಷಯ.. ಯಾಕಂದ್ರೆ 400 ಸೀಟು ಟಾರ್ಗೆಟ್‌ ಇಟ್ಟುಕೊಂಡಿದ್ದ ಬಿಜೆಪಿ ನೇತೃತ್ವದ ಎನ್‌ಡಿಎಗೆ ಅಷ್ಟು ಸೀಟು ಕಷ್ಟ ಕಷ್ಟ ಎಂದೇ ಹೇಳಲಾಗುತ್ತಿದೆ.. ಇನ್ನು ಸದ್ಯ ಲೋಕಸಭೆಯಲ್ಲಿ ಬಿಜೆಪಿ ಒಂದೇ 303 ಸದಸ್ಯಬಲ ಹೊಂದಿದೆ.. ಅಂದರೆ ಸರಳ ಬಹುಮತದ 272 ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳನ್ನು ಬಿಜೆಪಿಯೊಂದೇ ಕಳೆದ ಚುನಾವಣೆ ಗಳಿಸಿತ್ತು.. ಆದ್ರೆ ಈ ಬಾರಿ ಮಿತ್ರಪಕ್ಷಗಳ ಬೆಂಬಲವಿಲ್ಲದೆ ಸರ್ಕಾರ ರಚನೆ ಮಾಡೋದಕ್ಕೆ ಆಗಲ್ಲ ಅಂತ ಕೆಲವರು ಅಂದಾಜಿಸುತ್ತಿದ್ದಾರೆ..

ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಬಿಜೆಪಿ ಈ ಬಾರಿಯೂ ಅತಿಹೆಚ್ಚು ಸ್ಥಾನಗಳನ್ನು ಗಳಿಸುತ್ತದೆ ಎಂದು ಹೇಳಿದ್ದರು.. ಆದ್ರೆ ಹಿರಿಯ ರಾಜಕಾರಣಿ ಯೋಗೇಂದ್ರ ಯಾದವ್‌ ಮಾತ್ರ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.. ಯೋಗೇಂದ್ರ ಯಾದವ್‌ ಅವರ ಲೆಕ್ಕಾಚಾರದ ಪ್ರಕಾರ ಬಿಜೆಪಿ 240 ರಿಂದ 260 ಸ್ಥಾನಗಳನ್ನಷ್ಟೇ ಗಳಿಸಲಿದೆಯಂತೆ.. ಅದಂತೆ ಕಳೆದ ಬಾರಿಗಿಂತ ಈ ಬಾರಿ ಸುಮಾರು 50 ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ ಎಂದು ಯೋಗೇಂದ್ರ ಯಾದವ್‌ ಹೇಳುತ್ತಿದ್ದಾರೆ.. ಇನ್ನು ಬಿಜೆಪಿ ಮಿತ್ರಪಕ್ಷಗಳು ಈ ಬಾರಿ 34 ರಿಂದ 45 ಸ್ಥಾನಗಳನ್ನು ಪಡೆಯುತ್ತವೆ.. ಇದರಿಂದಾಗಿ ಮಿತ್ರಪಕ್ಷಗಳ ನೆರವಿನೊಂದಿಗೆ ಬಿಜೆಪಿ ಈ ಬಾರಿಯೂ ಅಧಿಕಾರ ಹಿಡಿಯಲಿದೆ ಅನ್ನೋದು ಯೋಗೇಂದ್ರ ಯಾದವ್‌ ಅವರ ಮಾತು..

ಇನ್ನು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ 52 ಸ್ಥಾನಗಳನ್ನು ಗೆದ್ದಿತ್ತು.. ಆದ್ರೆ ಈ ಬಾರಿ ಕಾಂಗ್ರೆಸ್‌ ಸಾಕಷ್ಟು ಚೇತರಿಸಿಕೊಂಡಿದೆ ಎಂದು ಯೋಗೇಂದ್ರ ಯಾದವ್‌ ಹೇಳುತ್ತಾರೆ.. ಈ ಬಾರಿ ಕಾಂಗ್ರೆಸ್‌ ಪಕ್ಷ 85 ರಿಂದ 100 ಸ್ಥಾನಗಳನ್ನು ಗೆಲ್ಲಬಹುದು.. ನೂರು ದಾಟಿದರೂ ಅಚ್ಚರಿ ಇಲ್ಲ ಅನ್ನೋದು ಅವರ ಅಭಿಪ್ರಾಯ.. ಇನ್ನು ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳು 120-135 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಯೋಗೇಂದ್ರ ಯಾದವ್‌ ಹೇಳುತ್ತಿದ್ದಾರೆ..

ಯೋಗೇಂದ್ರ ಯಾದವ್‌ ಅವರ ಪ್ರಕಾರ ಈ ಬಾರಿ ಬಿಜೆಪಿ ಸರಳ ಬಹುಮತದಷ್ಟು ಸೀಟುಗಳನ್ನು ಸ್ವತಂತ್ರವಾಗಿ ಪಡೆಯುವುದಿಲ್ಲ.. ಮಿತ್ರಪಕ್ಷಗಳ ನೆರವಿನಿಂದಲೇ ಅಧಿಕಾರ ಹಿಡಿಯುತ್ತದೆ ಎಂದು ಹೇಳುತ್ತಿದ್ದಾರೆ..

Share Post