CrimeNational

ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ; ಜಮ್ಮು-ಕಾಶ್ಮೀರದ ನೌಗಾಮ್ ಪ್ರದೇಶದಲ್ಲಿ ನಡೆದ ಪೊಲೀಸರ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.  ಕಾಶ್ಮೀರ ವಲಯ ಪೊಲೀಸರು ಈ ಕುರಿತು ಟ್ವೀಟ್‌ ಮಾಡಿದ್ದು, ಭಯೋತ್ಪಾದಕ ಗುಂಪು ಅನ್ಸರ್ ಘಜ್ವತ್-ಉಲ್-ಹಿಂದ್‌ನೊಂದಿಗೆ ಭಯೋತ್ಪಾದಕರು ಸಂಬಂಧ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಇಬ್ಬರು ಭಯೋತ್ಪಾದಕರನ್ನು ಪುಲ್ವಾಮಾದ ಐಜಾಜ್ ರಸೂಲ್ ನಜರ್ ಮತ್ತು ಶಾಹಿದ್ ಅಹ್ಮದ್ ಅಲಿಯಾಸ್ ಅಬು ಹಮ್ಜಾ ಎಂದು ಪೊಲೀಸರು ಗುರುತಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಪುಲ್ವಾಮಾದಲ್ಲಿ ಪಶ್ಚಿಮ ಬಂಗಾಳದ ಕಾರ್ಮಿಕನ ಮೇಲೆ ನಡೆದ ದಾಳಿಯಲ್ಲಿ ಇವರು ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 

Share Post