Cinema

‘ವಾತಿ’ ಆಗ್ತಿದ್ದಾರೆ ತಮಿಳಿನ ಧನುಷ್

ಚೆನೈ : ತಮಿಳು ಚಿತ್ರ ರಂಗದ ಸೂಪರ್‌ ಸ್ಟಾರ್‌ ಧನುಷ್‌ ಅವರ ಮುಂದಿನ ಸಿನಿಮಾ ಘೋಷಣೆ ಆಗಿದೆ. ಈ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿದೆ. ಧನುಷ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಟೈಟಲ್‌ನ ಮೋಷನ್‌ ಪೋಸ್ಟರ್‌ ಹಂಚಿಕೊಂಡಿದ್ದಾರೆ.

ಸಿತಾರಾ ಎಂಟರ್‌ಟೈನ್‌ಮೆಂಟ್ಸ್‌ ಅರ್ಪಿಸುತ್ತಿರುವ ಈ ಸಿನಿಮಾದ ಟೈಟಲ್‌ ಟೀಸರ್‌ ನೋಡಿದರೆ ಕಾಲೇಜ್‌ ಸುತ್ತ ಸಾಗುವ ಕಥೆ ಎನಿಸುತ್ತದೆ. ತೆಲುಗು ಮತ್ತು ತಮಿಳಿನಲ್ಲಿ ಏಕಕಾಲದಲ್ಲೇ ಸಿನಿಮಾ ತಯಾರಾಗಲಿದ್ದು ಧನುಷ್‌ ಅವರು ಅಧಿಕೃತವಾಗಿ ಟಾಲಿವುಡ್‌ಗೆ ಲಗ್ಗೆ ಇಟ್ಟಂತಾಗುತ್ತದೆ.

ವಾತಿ ಎಂದರೆ ಸರ್‌ ಎಂಬ ಅರ್ಥ ಕೊಡುತ್ತದೆ. ಹಾಗಾಗಿ ತಮಿಳಿನಲ್ಲಿ ವಾತಿ, ತೆಲುಗಿನಲ್ಲಿ ಸರ್‌ ಎಂಬ ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ತೆರಕಂಡಿದ್ದ ಮಾಸ್ಟರ್‌ ಸಿನಿಮಾದಲ್ಲಿ ವಾತಿ ಕಮಿಂಗ್‌ ಸಾಂಗ್‌ ಸಿಕ್ಕಾಪಟ್ಟೆ ಹಿಟ್‌ ಆಗಿತ್ತು. ಕ್ರಿಕೇಟರ್ಸ್‌ ಕೂಡ ವಾತಿ ಸಾಂಗಿಗೆ ರೀಲ್ಸ್‌ ಮಾಡಿ ಪೋಸ್ಟ್‌ ಮಾಡಿದ್ದರು. ಈಗ ಅದೇ ಶೀರ್ಷಿಕೆಯಡಿ ಸಿನಿಮಾ ಬರುತ್ತಿರೋದು ವಿಶೇಷ.

 

Share Post