Cinema

ಪಂಚಭೂತಗಳಲ್ಲಿ ಲೀನವಾದ ಬಪ್ಪಿ ಲಹಿರಿ

ಮುಂಬೈ : ಭಾರತದ ಡಿಸ್ಕೋ ಕಿಂಗ್‌ ಎಂದೇ ಗುರುತಿಸಿಕೊಂಡಿದ್ದ ಬಪ್ಪಿಲಹಿರಿ ಅವರು ನಿನ್ನೆ ನಿಧನರಾಗಿದ್ದರು. ಇಂದು ಅವರ ಅಂತ್ಯಕ್ರಿಯೆ ಮುಂಬೈನಲ್ಲಿ ನೆರವೇರಿದೆ. ಇಂದು ಮಧ್ಯಾಹ್ನ ಬಪ್ಪಿ ಲಹಿರಿ ಪಂಚಭೂತಗಳಲ್ಲಿ ಲೀನವಾದರು.

ಕುಟುಂಬ ಸದಸ್ಯರು, ಸ್ನೇಹಿತರು ಸೇರಿದಂತೆ ಬಾಲಿವುಡ್‌ ತಾರೆಗಳಿಂದಲೂ ಬಪ್ಪಿ ಅವರಿಗೆ ಭಾವುಕ ವಿದಾಯವನ್ನು ನೀಡಲಾಯಿತು. ಟ್ರಕ್‌ನಲ್ಲಿ ಬಪ್ಪಿ ಅವರ ಪಾರ್ಥೀವ ಶರೀರವನ್ನು ಮುಂಬೈನ ಪವನ್‌ ಹನ್ಸ್‌ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು.

ಅಂತಿಮ ವಿಧಿ ವಿಧಾನಗಳ ಬಳಿಕ ಬಪ್ಪ ಲಹಿರಿ ತಮ್ಮ ತಂದೆಯ ಚಿತೆಗೆ ಅಗ್ನಿ ಸ್ಪರ್ಷ ಮಾಡಿದರು. ವಿದ್ಯಾ ಬಾಲನ್‌, ರೂಪಾಲಿ ಗಂಗೂಲಿ, ಯಗ್ನಿಕ್‌, ಶಾನ್‌ , ಅರುಣ್‌, ಲಲಿತ್‌ ಪಂಡಿತ್‌ ಸೇರಿದಂತೆ ಹಲವು ಪ್ರಮುಖ ಬಾಲಿವುಡ್‌ ಗಣ್ಯರು ಬಪ್ಪಿ ಲಹಿರಿ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

Share Post