ವದಂತಿಗಳಿಗೆ ಒಟ್ಟಿಗೆ ಬಂದು ಉತ್ತರ ಕೊಟ್ಟ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ
ಬೆಂಗಳೂರು; ನಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದೇವೆ.. ಇಬ್ಬರ ಆಲೋಚನೆಗಳು ಬೇರೆ ಬೇರೆ ಇದ್ದ ಕಾರಣಕ್ಕಾಗಿ ಇಬ್ಬರೂ ಮಾತಾಡಿಕೊಂಡೇ ಬೇರೆಯಾಗಿದ್ದೇವೆ.. ಯಾವುದೇ ಊಹಾಪೋಹಳಿಗೆ ಕಿವಿಗೊಡಬೇಡಿ ಎಂದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಹೇಳಿದ್ದಾರೆ.. ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಸೋಷಿಯಲ್ ಮೀಡಿಯಾದಲ್ಲಿ ಹಬ್ಬುತ್ತಿರುವ ವಿಷಯಗಳೆಲ್ಲಾ ಸುಳ್ಳು ಎಂದು ಹೇಳಿದ್ದಾರೆ..
ಇಬ್ಬರ ನಡುವೆ ಕೆಲ ಭಿನ್ನಾಭಿಪ್ರಾಯಗಳಿದ್ದವು.. ಇಬ್ಬರೂ ಎಷ್ಟು ದಿನ ಅಂತ ಹೊಂದಾಣಿಕೆ ಮಾಡಿಕೊಂಡು ಹೋಗವುದು ಅನ್ನೋ ಕಾರಣಕ್ಕೆ ನಾವು ಒಪ್ಪಿಗೆ ತೆಗೆದುಕೊಂಡೇ ಬೇರೆಯಾಗಿದ್ದೇವೆ.. ಯಾರ್ಯಾರ ವ್ಯಕ್ತಿಗಳ ಜೊತೆಗೋ ಸಂಬಂಧ ಕಟ್ಟಲಾಗುತ್ತಿದೆ.. ಅಂತಹ ಯಾವುದೇ ತಪ್ಪುಗಳು ನಡೆದಿಲ್ಲ.. ಹಬ್ಬಿರುವ ಸುದ್ದಿಗಳೆಲ್ಲಾ ಸುಳ್ಳು ಎಂದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಹೇಳಿಕೊಂಡಿದ್ದಾರೆ..