Cinema

ಸಾಮ್ರಾಟ್ ಚಿತ್ರದ ಹಾಡಿಗೆ ಹೆಜ್ಜೆ ಹಾಕಬೇಕಿದದ್ದು ವಿನಯಾ ಪ್ರಸಾದ್ ಅಲ್ಲ!

ಸಾಹಸ ಸಿಂಹ ವಿಷ್ಣುವರ್ಧನ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ? ಅವರ ಆ ಪಾತ್ರಗಳನ್ನು ನಾವು ಮರೆಯಲು ಸಾಧ್ಯವೇ ಇಲ್ಲ. ಸೂರ್ಯವಂಶ, ಯಜಮಾನ, ಸಿಂಹಾದ್ರಿಯ ಸಿಂಹ, ವೀರಪ್ಪ ನಾಯಕ, ಜಮೀನ್ದಾರು. ಇದೆಲ್ಲಾ ಹೆಸರಾಂತ ಸಿನಿಮಾಗಳು. ಇನ್ನು ಕರ್ಣ, ನಾಗರಹಾವು, ಬಂಧನ, ಬಂಗಾರದ ಜಿಂಕೆ, ಕಿಟ್ಟು ಪುಟ್ಟು, ಕಳ್ಳ ಕುಳ್ಳ ಸಿನಿಮಾಗಳು ಕೂಡ ಸೂಪರ್ ಡೂಪರ್ ಹಿಟ್ ಸಿನಿಮಾಗಳು. ಅದೇ ಸಾಲಿಗೆ ಸಾಮ್ರಾಟ್ ಸಿನಿಮಾ ಕೂಡ ಸೇರುತ್ತದೆ. ಸಾಮ್ರಾಟ್ ಸಿನಿಮಾ ಎಷ್ಟೋ ಮಂದಿಗೆ ಗೊತ್ತಾಗದೆ ಇರಬಹುದು. ಆದರೆ ‘ನಿಮ್ ಕಡೆ ಸಾಂಬರ್ ಅಂದ್ರೆ ನಮ್ ಕಡೆ ತಿಳಿಯೋದಿಲ್ಲ, ನಮ್ ಕಡೆ ಡಾಂಬರ್ ಅಂದ್ರೆ ನಿಮ್ ಕಡೆ ತಿಳಿಯೋದಿಲ್ಲ’ ಈ ಹಾಡನ್ನಂತೂ ಎಲ್ಲರೂ ಕೇಳಿರುತ್ತಾರೆ. ತುಂಬಾ ಪಾಪ್ಯುಲರ್ ಗೀತೆ ಕೂಡ ಇದು. ನಮ್ಮ ವಿನಯಾ ಪ್ರಸಾದ್ ಅವರು ಎಲ್ಲಿ ಹೋದರೂ ಈ ಹಾಡನ್ನು ಹಾಡಿಯೇ ಹಾಡುತ್ತಾರೆ. ಇವತ್ತಿಗೂ ಎಷ್ಟೋ ಜನ ವಿನಯಾ ಪ್ರಸಾದ್ ಅವರನ್ನ ಈ ಹಾಡಿನ ಮೂಲಕವೇ ಗುರುತು ಹಿಡಿಯುತ್ತಾರೆ. ಈ ಹಾಡಿನ ಮೇಕಿಂಗ್ ಬಗ್ಗೆ ನಿಮಗೆ ಎಷ್ಟು ಗೊತ್ತು? ಈ ಹಾಡು ಹೇಗೆ ತಯಾರಾಯ್ತು ನಿಮಗೆ ಗೊತ್ತಾ? ತುಂಬಾ ಇಂಟರೆಸ್ಟಿಂಗ್ ವಿಷಯ ಇದೆ.

ನಿಮಗೆ ಗೊತ್ತಾ?

ವಿನಯಾ ಪ್ರಸಾದ್ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ಹಾಡಿನ ಮೇಕಿಂಗ್ ಬಗ್ಗೆ ಮಾತನಾಡಿದ್ದಾರೆ. ಶೋ ಮದ್ಯದಲ್ಲಿ. ಶೋ ಒಂದರಲ್ಲಿ ಈ ಹಾಡನ್ನು ಹಾಡ್ತಾರೆ ಆನಂತರ ಅವರು ಮಾತುಕತೆಯ ಸಂದರ್ಭದಲ್ಲಿ ಈ ಹಾಡಿನ ಹಿಂದಿನ ಸ್ವಾರಸ್ಯಕರ ವಿಷಯವನ್ನು ವಿನಯಾ ಪ್ರಸಾದ್ ಅವರು ವಿವರಿಸಿದರು. ಈ ಹಾಡನ್ನು ಸಿಲ್ಕ್ ಸ್ಮಿತಾ ಅವರಿಂದ ಡ್ಯಾನ್ಸ್ ಮಾಡಿಸುವ ಐಡಿಯಾದಲ್ಲಿದ್ದರಂತೆ ಚಿತ್ರ ತಂಡ. ಒಂದು ಸುತ್ತಿನ ಮಾತುಕತೆ ಕೂಡ  ಸಿಲ್ಕ್ ಸ್ಮಿತಾ ಅವರೊಟ್ಟಿಗೆ ಆಗಿತ್ತಂತೆ. ಆದರೆ ನಂತರ ನಿರ್ದೇಶಕರು ಈ ಹಾಡಿಗೆ ಯಾವುದಾದರೂ ಕನ್ನಡದ ಹುಡುಗಿ ಕೈಯಲ್ಲಿ ಡಾನ್ಸ್ ಮಾಡಿಸೋಣ ಅಂತ ಹೇಳಿದ್ದಾರೆ. ಆಗ ವಿನಯಾ ಪ್ರಸಾದ್ ಅವರಿಗೆ ಕರೆ ಬರುತ್ತೆ. ಅವರು ಕೂಡ ಈ ಹಾಡಿನಲ್ಲಿ ತುಂಬಾ ಚೆನ್ನಾಗಿ ಅಭಿನಯಿಸುತ್ತಾರೆ. ನಂತರ ಈ ಹಾಡು ಎಷ್ಟು ಸದ್ದು ಮಾಡುತ್ತೆ ಅಂದರೆ ಅದನ್ನು ಯಾರೂ ಊಹಿಸಲೂ ಆಗುವುದಿಲ್ಲ ಅಷ್ಟು ಸದ್ದು ಮಾಡುತ್ತೆ. ವಿಷ್ಣು ದಾದಾ ಅವರು ಕೂಡ ವಿನಯಾ ಪ್ರಸಾದ್ ಅವರ ಅಭಿನಯವನ್ನು ನೋಡಿ ಮೆಚ್ಚಿಕೊಂಡಿದ್ದರಂತೆ. ಒಂದು ರೀತಿ ಕನ್ನಡಿಗರ ನ್ಯಾಷನಲ್ ಆಂಥಮ್ ರೀತಿಯೇ ಆಗಿ ಬಿಟ್ಟಿದೆ. ಈಗ ಈ ಹಾಡು ಕೇಳುತ್ತಿದ್ದರೆ ವಿನಯಾ ಪ್ರಸಾದ್ ಅವರೇ ನಮ್ಮ ಕಣ್ಮುಂದೆ ಬರ್ತಾರೆ, ಅವರ ಜಾಗದಲ್ಲಿ ಸಿಲ್ಕ್ ಅವರನ್ನ ಊಹಿಸಿಕೊಳ್ಳಲು ಆಗುವುದೇ ಇಲ್ಲ. ಒಂದು ವೇಳೆ ಸಿಲ್ಕ್ ಸ್ಮಿತಾ ಹೆಜ್ಜೆ ಹಾಕಿದ್ದರೆ ಆ ಹಾಡಿನ ಅಸಲೀ ಸ್ವಾದವೇ ಇಲ್ಲದಂತೆ ಆಗಿ ಬಿಡುತ್ತಿತ್ತೇನೋ. ಈ ಸಾಂಗ್ ವಿನಯಾ ಪ್ರಸಾದ್ ಅವರಿಗೇ ಪರ್ಫೆಕ್ಟ್. ನಿಮಗೂ ಇದೇ ಫೀಲಿಂಗ್ ಇದ್ಯಾ???

Share Post