HealthInternationalTechnology

ಕ್ರಯಾನಿಕ್ಸ್‌ ಮೂಲಕ ಸತ್ತ ನಂತರವೂ ಬದುಕಬಹುದಾ..? 

ನಿಮಗೆ ಮೆಡಿಕಲ್‌ ಬ್ಯಾಕ್‌ಗ್ರೌಂಡ್‌ ಇದೆಯಾ..? ಮೃತದೇಹದ ಪಕ್ಕದಲ್ಲಿ ಕೆಲಸ ಮಾಡುವ ಧೈರ್ಯ ಇದೆಯಾ..? ಒತ್ತಡದಲ್ಲಿ ಕೂಡಾ ನಿಮ್ಮ ಗುರಿಯನ್ನು ಸಾಧಿಸುವ ಶಕ್ತಿ ಇದೆಯಾ..?  ಇವೆಲ್ಲಾ ಮಾರ್ಚುರಿಯಲ್ಲಿ ಕೆಲಸ ಮಾಡಲು ಇರಬೇಕಾದ ಅರ್ಹತೆಗಳಲ್ಲ. ಕ್ರಯಾನಿಕ್ಸ್‌ ಟೆಕ್ನಿಷಿಯನ್‌ ಉದ್ಯೋಗಕ್ಕೆ ಬೇಕಾದ ಅರ್ಹತೆಗಳು.

ಅಷ್ಟಕ್ಕೂ ಇವರು ಏನು ಕೆಲಸ ಮಾಡುತ್ತಾರೆ ಎಂಬ ಸಂದೇಹ ನಿಮ್ಮದಾ..? ಆಗಿನ್ನೂ ಸಾವನ್ನಪ್ಪಿದವರ ಶರೀರಗಳನ್ನು ಭದ್ರವಾಗಿರಿಸಿ, ಭವಿಷ್ಯತ್ತಿನಲ್ಲಿ ಅವರಿಗೆ ಪ್ರಾಣ ಬರಿಸುವ ಅವಕಾಶ ಅವಕಾಶ ಕಲ್ಪಿಸಿಕೊಡುವುದು ಇವರ ಕೆಲಸ. ಮೆಡಿಕಲ್‌ ಸೈನ್ಸ್‌ ಅಭಿವೃದ್ಧಿಯಾಗುವಷ್ಟೂ, ಜೀವನದಲ್ಲಿ ಎರಡನೇ ಚಾನ್ಸ್‌ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುವವರಿಗೆ, ಈ ಕ್ರಯಾನಿಕ್ಸ್‌ ಟೆಕ್ನಿಷಿಯನ್ಸ್‌ ಆಸ್ಪತ್ರೆಗಳಲ್ಲಿ ಮತ್ತಷ್ಟು ಹೆಚ್ಚಾಗಿ ಕಾಣಿಸುತ್ತಾರೆ ಎಂದು ಅಂದಾಜಿಸಲಾಗುತ್ತಿದೆ.
ಕ್ರಯಾನಿಕ್ಸ್‌ ಅಂದ್ರೆ ಏನು..?
ಸಾವನ್ನಪ್ಪಿದ ವ್ಯಕ್ತಿಯ ದೇಹ, ಮೆದುಳ ಹಾಳಾಗದಂತೆ ದೇಹವನ್ನು ಫ್ರೀಜ್‌ ಮಾಡಿ ಭದ್ರವಾಗಿ ಕಾಪಾಡುವುದೇ ಕ್ರಯಾನಿಕ್ಸ್‌. ಪೇಷೆಂಟ್‌ ಯಾವ ಕಾರಣದಿಂದ ಸಾವನ್ನಪ್ಪಿದನೋ, ಭವಿಷ್ಯತ್ತಿನಲ್ಲಿ ಮೆಡಿಕಲ್‌ ಸೈನ್ಸ್‌ ಅದಕ್ಕೆ ಪರಿಹಾರ ಕಂಡುಹಿಡಿಯುತ್ತದೆ. ಈ ಮೂಲಕ ಅವರನ್ನು ಮತ್ತೆ ಬದುಕಿಸುವುದಕ್ಕೆ ಕ್ರಯಾನಿಕ್ಸ್‌ ಉಪಯೋಗವಾಗುತ್ತದೆ ಎಂದು ಕ್ರಯಾನಿಕ್ಸ್‌ ಟೆಕ್ನಿಷಿಯನ್ಸ್‌ ಹೇಳುತ್ತಾರೆ.
ಮನುಷ್ಯ ಸಾವನ್ನಪ್ಪುತ್ತಿದ್ದಂತೆ, ಹೃದಯ ಬಡಿತ ನಿಂತುಹೋಗುತ್ತದೆ. ಮೆದುಳಿಗೆ ಆಕ್ಸಿಜನ್‌ ಸರಬರಾಜು ನಿಂತುಹೋಗುತ್ತದೆ. ಇದರಿಂದ ಹೊಸ ಜ್ಞಾಪಕಗಳು ಇರುವುದಿಲ್ಲ. ಇದರಿಂದ ಮೆದುಳಿನಲ್ಲಿನ ಕಣಗಳು ಸಾವನ್ನಪ್ಪುವುದಕ್ಕೆ ಪ್ರಾರಂಭವಾಗುತ್ತವೆ. ಸರಿಯಾಗಿ ಅದೇ ಸಮಯಕ್ಕೆ ಕ್ರಯಾನಿಕ್ಸ್‌ ಟೆಕ್ನಿಷಿಯನ್ಸ್‌ ಕೆಲಸ ಶುರುವಾಗುತ್ತದೆ. ಯಾವಾಗ ವೈದ್ಯರು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಅಧಿಕೃತವಾಗಿ ಪ್ರಕಟಿಸುತ್ತಾರೋ, ಆಗ ಶರೀರ ಹಾಳಾಗದಂತೆ ತಡೆಗಟ್ಟಲು ಶರೀರಕ್ಕೆ ಐಸ್‌ ಬಾತ್‌ ಮಾಡಿಸಬೇಕು. ಅನಂತರ ದೇಹದಲ್ಲಿನ ರಕ್ತವನ್ನು ಪೂರ್ತಿಯಾಗಿ ತೊಲಗಿಸಬೇಕು. ಆ ಜಾಗದಲ್ಲಿ ಕ್ರಯಾಪ್ರೊಟೆಕ್ಟೆಂಟ್‌ ಏಜೆಂಟ್‌ಗಳನ್ನು ತುಂಬಿಸುತ್ತಾರೆ. ಅನಂತರ ಆ ದೇಹವನ್ನು ಒಂದು ಸ್ಟೋರೇಜ್‌ ಟ್ಯಾಂಕ್‌ನಲ್ಲಿಟ್ಟು, ಲಿಕ್ವಿಡ್‌ ನೈಟ್ರೋಜನ್‌ ಮೂಲಕ ಉಷ್ಣಾಂಶವನ್ನು ಮೈನಸ್‌ ೧೯೬ ಡಿಗ್ರಿ ಸೆಂಟಿಗ್ರೇಡ್‌ಗೆ ಇಡಲಾಗುತ್ತದೆ.

ಎರಡು ಸಾವಿರ ಮಂದಿ ಕ್ಯೂನಲ್ಲಿದ್ದಾರೆ..!
ನಿಜ ಹೇಳಬೇಕೆಂದರೆ ೧೯೭೦ರಿಂದಲೂ ಕ್ರಯಾನಿಕ್ಸ್‌ ವಿಧಾನವನ್ನು ಉಪಯೋಗಿಸುತ್ತಿದ್ದಾರೆ. ಆದರೆ ಕೇವಲ ಅಮೆರಿಕ, ರಷ್ಯಾದಲ್ಲಿ ಮಾತ್ರ ಹೀಗೆ ದೇಹಗಳನ್ನು ಭದ್ರವಾಗಿರಿಸುವ ಸೌಲಭ್ಯಗಳಿವೆ.
ಅಮೆರಿಕದ ಮಿಚಿಗನ್‌ ರಾಜ್ಯದಲ್ಲಿರುವ ಕ್ರಯಾನಿಕ್ಸ್‌ ಇನ್ಸ್‌ಟಿಟ್ಯೂಟ್‌ನಲ್ಲಿ ಇದಕ್ಕಾಗಿ ಈಗಾಗಲೇ ೨ ಸಾವಿರ ಮಂದಿ ಸಹಿ ಮಾಡಿದ್ದಾರೆ. ಈಗಾಗಲೇ ೧೬೫ ಮಂದಿಯ ದೇಹಗಳನ್ನು ಕ್ರಯಾನಿಕ್ಸ್‌ ವಿಧಾನದಲ್ಲಿ ಭದ್ರವಾಗಿರಿಸಲಾಗಿದೆ. ಪ್ಯಾರಾಮೆಡಿಕಲ್‌ ಕೆಲಸ ಮಾಡುವ ಡೆನ್ನಿಸ್‌ ಕೋವಾಲ್‌ಸ್ಕಿ ಈ ಇನ್ಸಿಟಿಟ್ಯೂಟ್‌ನ ಅಧ್ಯಕ್ಷ. ಇಲ್ಲಿ ಕ್ರಯಾನಿಕ್ಸ್‌ ವಿಧಾನಗಳನ್ನು ಅವರೇ ನಿರ್ವಹಣೆ ಮಾಡುತ್ತಾರೆ.
ಅವರು ತಮ್ಮ ಕೆಲಸವನ್ನು ಹೀಗೆ ವಿವರಿಸಿದ್ದಾರೆ:
ʻಕ್ರಯಾನಿಕ್‌ ಟೆಕ್ನಿಷಿಯನ್‌ ಗಾಗಿ ಪ್ಯುನರಲ್‌ ಡೈರೆಕ್ಟರ್‌ ಲೈಸೆನ್ಸ್‌, ಪೆರ್‌ಫ್ಯೂಜನ್‌ ಪಂಪ್‌ನ್ನು ನಡೆಸುವುದರಲ್ಲಿ ಅನುಭವ ಹಾಗೂ ಕೆಲವು ಪ್ರಾಥಮಿಕ ಸರ್ಜಿಕಲ್‌ ನೈಪುಣ್ಯ ಅವಶ್ಯಕ. ಕೃತ್ತಿಮ ಮೇಧಸ್ಸು, ಜೆನೆಟಿಕ್‌ ಬದಲಾವಣೆಗಳು, ಸ್ಟೆಮ್‌ ಸೆಲ್‌ ಎಂಜಿನಿಯರಿಂಗ್‌ – ಇವೆಲ್ಲಾ ಕೂಡಾ ನಮ್ಮ ಕೆಲಸ ಸರಿಯಾಗಿದೆ ಎಂದು ನಿರೂಪಿಸುತ್ತಿವೆʼ
ಭವಿಷ್ಯ ಹೇಗಿರುತ್ತದೆ ಗೊತ್ತಾ..?
ಈ ಇನ್ಸ್‌ಟಿಟ್ಯೂಟ್‌ನಲ್ಲಿ ಪ್ರಸ್ತುತ ಕೇವಲ ಮೂವರು ಸಿಬ್ಬಂದಿ ಮಾತ್ರ ಇದ್ದಾರೆ. ಆದರೂ, ಮೆಡಿಕಲ್‌ ಸೈನ್ಸ್‌ ಅಭಿವೃದ್ಧಿ ಹೊಂದಿದಷ್ಟೂ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತೇವೆ ಅಂತ ಡೆನ್ನಿಸ್‌ ಹೇಳುತ್ತಾರೆ. ಈವರಿಗೆ ಪ್ರಪಂಚದಾದ್ಯಂತ ೫ ಸಾವಿರ ಮಂದಿ ತಮ್ಮ ದೇಹಗಳನ್ನು ಭದ್ರಪಡಿಸಬೇಕೆಂದು ಸಹಿ ಮಾಡಿದ್ದಾರೆಂದು ಡೆನ್ನಿಸ್‌ ಹೇಳುತ್ತಾರೆ.
ಹೀಗೆ ತಮ್ಮ ದೇಹವನ್ನು ಶರೀರವನ್ನು ಭದ್ರಪಡಿಸಬೇಕೆಂದು ಒಪ್ಪಂದ ಮಾಡಿಕೊಂಡವರಲ್ಲಿ ಡಾಕ್ಟರ್‌ ಆಂಡರ್ಸ್‌ ಸಾಂಡ್‌ಬರ್ಗ್‌ ಕೂಡಾ ಒಬ್ಬರು. ಅವರು ಆಕ್ಸ್‌ಫರ್ಡ್‌ ಯೂನಿವರ್ಸಿಟಿಯಲ್ಲಿ ಫ್ಯೂಚರ್‌ ಆಫ್‌ ಹ್ಯೂಮಾನಿಟಿ ಇನ್ಸ್‌ಟಿಟ್ಯೂಟ್‌ನಲ್ಲಿ ಸೀನಿಯರ್‌ ರಿಸರ್ಚ್‌ ಫೆಲೋ ಆಗಿದ್ದಾರೆ.
ಬ್ರೈನ್‌ ಪ್ರಿಜರ್ವೇಷನ್‌ ಫೌಂಡೇಷನ್‌ ಬೋರ್ಡ್‌ ಸದಸ್ಯರಾದ ಸಾಂಡ್‌ಬರ್ಗ್‌, ತನ್ನ ಸಾವಿನ ನಂತರ ಕೇವಲ ತನ್ನ ತಲೆಯನ್ನು ಭದ್ರಪಡಿಬೇಕೆಂದು ಒಪ್ಪಂದ ಮಾಡಿಕೊಂಡಿದ್ದಾರೆ. ಡೆನ್ನಿಸ್‌ ರೀತಿಯಲ್ಲೇ ಸಾಂಡ್‌ಬರ್ಗ್‌ ಕೂಡಾ ಆಶಾವಾದಿ. ಭವಿಷ್ಯತ್ತಿನಲ್ಲಿ ಪ್ರತಿ ಆಸ್ಪತ್ರೆಯಲ್ಲೂ ಒಂದು ಕ್ರಯಾನಿಕ್ಸ್‌ ಟೆಕ್ನಿಷಿಯನ್‌ ಇರುತ್ತಾರೆ ಎಂದು ಅವರು ಭಾವಿಸುತ್ತಿದ್ದಾರೆ.
ಹೃದಯ ಇಲ್ಲವೆ ಬ್ರೈನ್‌ ಸರ್ಜರಿ ಮಾಡುವಾಗ ಮತ್ತಷ್ಟು ಸಮಯಕ್ಕಾಗಿ ವೈದ್ಯರು ಶರೀರದ ಟೆಂಪರೇಚರ್‌ ಕಡಿಮೆ ಮಾಡುತ್ತಾರೆ. ಶರೀರವನ್ನು ಪೂರ್ತಿ ಭದ್ರಪಡಿಸುವುದು ಕೂಡಾ ಇಂತಹದ್ದೇ ಎಂದು ಸಾಂಡ್‌ಬರ್ಗ್‌ ಹೇಳುತ್ತಾರೆ.
ಕ್ರಯಾನಿಕ್ಸ್‌, ಕ್ರಯಾಜೆನಿಕ್ಸ್‌
ಈ ಎರಡೂ ಒಂದೇ ಎಂಬಂತೆ ಕಾಣಿಸಿದರೂ, ಶಾಸ್ತ್ರ ಪರಿಭಾಷೆಯಲ್ಲಿ ಇವೆರಡೂ ಬೇರೆ ಬೇರೆ. ಕ್ರಯಾನಿಕ್ಸ್‌ ಮರಣದ ನಂತರ ದೇಹವನ್ನು ಭದ್ರವಾಗಿರಿಸುವುದಕ್ಕೆ ಸಂಬಂಧಿಸಿದ ಸಬ್ಜೆಕ್ಟ್‌. ಕ್ರಯಾನಿಕ್ಸ್‌ನ್ನು ಸಮರ್ಥಿಸುವವರಲ್ಲಿ ತುಂಬಾ ಜನ, ಮರಣವನ್ನು ಜಯಿಸುವ ಸಾಂಕೇತಿಕ ಪರಿಜ್ಞಾನ ಯಾವಾಗ ಸಾಧ್ಯವಾಗುತ್ತದೋ ತಮಗೆ ಖಚಿತವಾಗಿ ಗೊತ್ತಿಲ್ಲ ಎಂದು ಹೇಳುತ್ತಾರೆ.
ಇನ್ನು ಕ್ರಯಾಜೆನಿಕ್ಸ್‌ನ್ನು ಈಗಾಗಲೇ ಅನೇಕ ಕಡೆಗಳಲ್ಲಿ ಉಪಯೋಗಿಸುತ್ತಿದ್ದಾರೆ. ಇದರಲ್ಲಿ ಭವಿಷ್ಯತ್ತಿನ ಅವಶ್ಯಕತೆಗಳಿಗಾಗಿ ವೀರ್ಯಾಣುಗಳು, ಅಂಡಾಣುಗಳು, ಚರ್ಮ ಮುಂತಾದವುಗಳನ್ನು ಮೈನಸ್‌ ೧೫೦ ಡಿಗ್ರಿ ಸೆಂಟಿಗ್ರೇಡ್‌ಗಿಂತ ಕಡಿಮೆ ಉಷ್ಣಾಂಶದಲ್ಲಿರಿಸುತ್ತಾರೆ. ಆದರೆ ಲಂಡನ್‌ನಲ್ಲಿರುವ ಕಿಂಗ್ಸ್‌ ಕಾಲೇಜಿನಲ್ಲಿ ನ್ಯೂರೋಸೈನ್ಸ್‌ ಪ್ರೊಫೆಸರ್‌ ಆಗಿರುವ ಕ್ಲೈವ್‌ ಕೋಯೆನ್‌ ಹೀಗೆ ಮೆದಳು ಅಥವಾ ದೇಹವನ್ನು ಭದ್ರವಾಗಿರಿಸುವ ಕ್ರಯಾನಿಕ್ಸ್‌ ಸಾಂಕೇತಿಕ ವಿಧಾನ ವಿಫಲವಾಗುತ್ತದೆಂದು ಹೇಳುತ್ತಾರೆ. ಅವಯವಗಳ ಬದಲಾವಣೆಯಲ್ಲಿ ಮಾತ್ರ ಈ ವಿಧಾನದಿಂದ ಅದ್ಭುತ ಫಲಿತಾಂಶ ಸಿಗಲಿದೆ. ಆದರೆ ಮನುಷ್ಯನನ್ನು ಬದುಕಿಸುವುದು ಕಷ್ಟವಾಗಬಹುದು ಎಂಬುದು ಅವರ ಅಭಿಪ್ರಾಯ.

Share Post