Cinema

ವಿಜಯ್‌ ಸೇತುಪತಿ ಜೊತೆ ಕತ್ರಿನಾ ಕೈಫ್‌ ‘ಮೆರಿ ಕ್ರಿಸ್‌ಮಸ್‌’

ಚೆನೈ : ತಮಿಳಿನ ವಿಜಯ್‌ ಸೇತುಪತಿ ಮತ್ತು ಕತ್ರಿನಾ ಕೈಫ್‌ ಮೆರಿ ಕ್ರಿಸ್‌ಮಸ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ವಿಷಯ ಈಗ ಅಧಿಕೃತವಾಗಿದೆ. ಶ್ರೀರಾಮ್‌ ರಾಘವನ್‌ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ತರಣ್‌ ಆದರ್ಶ್‌ ಈ ವಿಷಯದ ಬಗ್ಗೆ ಟ್ವೀಟ್‌ ಮಾಡಿದ್ದು, ತಂಡದ ಜೊತೆ ಇರುವ ಅಧಿಕೃತ ಫೋಟೋ ಅನ್ನು ಫೋಸ್ಟ್‌ ಮಾಡಿದ್ದಾರೆ.

ಬಾಲಿವುಡ್‌ ತಾರೆ ಕತ್ರಿನಾ ಕೈಫ್‌ ಈಗಷ್ಟೇ ಮದುವೆ ಮುಗಿಸಿಕೊಂಡು ಬಂದಿದ್ದಾರೆ, ಸಾಕಷ್ಟು ಹೊಸ ಸಿನಿಮಾಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಚಿತ್ರವನ್ನು ೨೦೨೨ ಡಿಸೆಂಬರ್‌ ೨೩ರಂದು ಕ್ರಿಸ್ಮಸ್‌ ವಾರಾಂತ್ಯಕ್ಕೆ ತೆರೆಗೆ ತರಲು ಚಿತ್ರ ತಂಡ ಪ್ಲಾನ್‌ ಮಾಡಿದೆ. ರಮೇಶ್‌ ತೌರಾನಿ ಮತ್ತು ಸಂಜಯ್‌ ರೌತ್‌ರೇ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ,.

ತಮಿಳು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ವಿಜಯ್‌ ಸೇತುಪತಿ ಬಾಲಿವುಡ್‌ನಲ್ಲಿಯೂ ಅಭಿನಯಿಸಿದ್ದರು. ಮುಂಬೈಕರ್‌ ಸಿನಿಮಾದಲ್ಲಿ ನಟಿಸಿ ಸಾಕಷ್ಟು ಕೀರ್ತಿ ಸಂಪಾದಿಸಿದ್ದರು.

Share Post