CinemaCrimeNational

ಲವರ್‌ಗೆ ಹೊಡೆದ ಯುವಕ; ತರಾಟೆಗೆ ತೆಗೆದುಕೊಂಡ ತೆಲುಗು ನಟ ನಾಗಶೌರ್ಯ

ಹೈದರಾಬಾದ್‌; ಹೀರೋಯಿಸಂ ತೆರೆ ಮೇಲೆ ಮಾತ್ರವಲ್ಲ, ರಿಯಲ್‌ ಆಗೂ ತೋರಿಸಬೇಕು ಅಲ್ವೇ..? ಹೌದು ಅಂತಿದ್ದಾರೆ ತೆಲುಗು ನಟ ನಾಗಶೌರ್ಯ. ಯಾಕಂದ್ರೆ ಅವರು ರಿಯಲ್‌ ಲೈಫ್‌ನಲ್ಲೂ ಹಿರೋಯಿಸಂ ತೋರಿಸಿ ಮಾದರಿಯಾಗಿದ್ದಾರೆ. ರಸ್ತೆಯಲ್ಲಿ ಪ್ರೇಮಿಗಳಿಬ್ಬರು ಜಗಳವಾಡಿದ್ದು, ಈ ವೇಳೆ ಯುವತಿಗೆ ಪ್ರೇಮಿ ಹೊಡೆದಿದ್ದಾನೆ. ಇದನ್ನು ಕಂಡ ನಟ ನಾಗಶೌರ್ಯ ಕಾರಿನಿಂದ ಇಳಿದು ಪ್ರೇಮಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸಖತ್‌ ವೈರಲ್‌ ಆಗುತ್ತಿದೆ.

ಅದೇನು ವಿಚಾರವೋ ಗೊತ್ತಿಲ್ಲ. ಹುಡುಗ ಹಾಗೂ ಹುಡುಗಿ ರಸ್ತೆಯಲ್ಲೇ ಜಗಳಕ್ಕಿಳಿದಿದ್ದರು. ಈ ವೇಳೆ ಯುವಕ, ಆ ಯುವತಿ ಮೇಲೆ ಕೈ ಮಾಡಿದ್ದಾನೆ. ಇದೇ ವೇಳೆ ನಟ ನಾಗಶೌರ್ಯ ಅವರ ಕಾರು ಕೂಡಾ ಅಲ್ಲೇ ನಿಂತಿತ್ತು. ಘಟನೆ ನೋಡಿದ ನಾಗಶೌರ್ಯ ಪಿತ್ತ ನೆತ್ತಿಗೇರಿದೆ. ಕೂಡಲೇ ಅವರು ಕಾರಿಳಿದುಬಂದಿದ್ದಾರೆ. ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಯುವಕ ಆಕೆ ನನ್ನ ಗರ್ಲ್‌ ಫ್ರೆಂಡ್‌ ಎಂದು ಹೇಳಿದ್ದಾನೆ. ಗರ್ಲ್‌ ಫ್ರೆಂಡ್‌ ಆದ್ರೆ ಹಲ್ಲೆ ಮಾಡಬಹುದಾ ಎಂದು ನಟ ನಾಗಶೌರ್ಯ ಪ್ರಶ್ನೆ ಮಾಡಿದ್ದಾರೆ. ಯುವತಿಗೆ ಸಾರಿ ಕೇಳುವಂತೆ ಸೂಚಿಸಿದ್ದಾರೆ.

ಈ ವೇಳೆ ಯುವತಿ ಏನೋ ಆಗಿದೆ ಬಿಟ್ಟುಬಿಡಿ ಎಂದು ನಟ ನಾಗಶೌರ್ಯ ಅವರಲ್ಲಿ ಪರಪರಿ ಬೇಡಿದ್ದಾಳೆ. ಆದ್ರೂ ನಾಗಶೌರ್ಯ ಸಮಾಧಾನವಾಗಿಲ್ಲ. ಈ ದೃಶ್ಯವನ್ನು ಕೆಲವರು ಚಿತ್ರೀಕರಿಸಿಕೊಂಡಿದ್ದು, ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

Share Post