CinemaCrime

ಸಲ್ಮಾನ್‌ ಖಾನ್‌ ತೋಟದ ಮನೆಗೆ ನುಗ್ಗಲು ಯತ್ನಿಸಿದ ಇಬ್ಬರ ಅರೆಸ್ಟ್‌

ಮುಂಬೈ; ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ತೋಟದ ಮನೆಯಲ್ಲಿ ಕಳ್ಳತನದ ಯತ್ನ ನಡೆದಿದೆ. ನವಿ ಮುಂಬೈನಲ್ಲಿರುವ ಸಲ್ಮಾನ್‌ ಖಾನ್‌ ಅವರ ಫಾರ್ಮ್‌ ಹೌಸ್‌ಗೆ ಇಬ್ಬರು ವ್ಯಕ್ತಿಗಳು ನುಗ್ಗಲು ಯತ್ಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತರನ್ನು ಅಜೇಶ್‌ ಕುಮಾರ್‌ ಗಿಲಾ ಹಾಗೂ ಗುರುಸೇವಕ್‌ ಸಿಂಗ್‌ ಸಿಖ್‌ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಸಲ್ಮಾನ್‌ ಖಾನ್‌ ಅವರ ತೋಟದ ಮನೆಯ ಗೋಡೆ ಜಿಗಿದು ಒಳ್ಳನುಗ್ಗಲು ಯತ್ನಿಸುತ್ತಿದ್ದರು. ಈ ವೇಳೆ ಅವರನ್ನು ಹಿಡಿಯಲಾಗಿದೆ. ಇಬ್ಬರೂ ಆರೋಪಿಗಳು ಪಂಜಾಬ್‌ ಮೂಲದವರು ಎಂದು ತಿಳಿದುಬಂದಿದೆ.

 

Share Post