Cinema

ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡಿಗೆ ನರೇಂದ್ರ ಮೋದಿ ಮಸ್ತ್‌ ಸ್ಟಪ್ಸ್:ತಗ್ಗೆದೆಲೆ

ಹೈದರಾಬಾದ್:‌ ಐಕಾನ್‌ ಸ್ಟಾರ್‌ ಅಲಲು ಅರ್ಜುನ್‌ ನಟನೆಯ ಪುಷ್ಟ ಸಿನಿಮಾ ತೆರೆಗೆ ಬಂದಿದ್ದೇ ತಡ ಎಲ್ಲಿ ನೋಡಿದ್ರೂ ಆ ಸಿನಿಮಾದ್ದೇ ಹಾಡು, ರೀಲ್ಸ್‌, ಡ್ಯಾನ್ಸ್‌, ಡೈಲಾಗ್‌ ಎಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಮೊಳಗುತ್ತಿವೆ. ಕೊರೊನಾ ನಡುವೆ ಸಿನಿಮಾ ತೆರ ಕಂಡರೂ ಸಹ ಬಾಕ್ಸಾಫೀಸ್‌ ಕಲೆಕ್ಷನ್‌ ಮಾತ್ರ ಜೋರಾಗಿದೆ. ಓಟಿಟಿ ಪ್ಲಾಟ್‌ಫಾರಂನಲ್ಲಿ ಸಿನಿಮಾ ಅದ್ದೂರಿಯಾಗಿ ತೆರೆ ಕಾಣುತ್ತಿದೆ. ಪುಷ್ಟ ಸಿನಿಮಾದ ಹಾಡು, ಡೈಲಾಗ್‌ಗಳು ದೇಶ ಮಾತ್ರವಲ್ಲದೆ. ವಿದೇಶದಲ್ಲೂ ಇದರ ಹಾವಳಿ ಹೆಚ್ಚಾಗಿದೆ. ಸಿಗ್ನೇಚರ್‌ ಸ್ಟೆಪ್‌, ಹಾಗೂ ಹಾಡುಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನೂ ಶ್ರೀವಲ್ಲಿ ಹಾಡಿಗೆ ಸೆಲೆಬ್ರೆಟಿಗಳು ಕೂಡ ನೃತ್ಯ ಮಾಡ್ತಿದಾರೆ. ಪುಷ್ಟ ಸಿನಿಮಾಗೆ ಈ ಸಿಗ್ನೇಚರ್‌ ಮೂಮೆಂಟ್‌ ಹಿಟ್‌ ತಂದುಕೊಂಡಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಈಗ ಈ ಸಿಗ್ನೇಚರ್‌ ಸ್ಟೆಪ್‌ ನಮ್ಮ ಪ್ರಧಾನ ಮಂತ್ರಿ ಮೋದಿಯವರು ಮಾಡಿರುವ ನೃತ್ಯ ಎಲ್ಲೆಡೆ ವೈರಲ್‌ ಆಗಿದೆ.

ನಿಜಕ್ಕೂ ಇದು ಮೋದಿಯವರು ಮಾಡಿರುವ ವಿಡಿಯೋ ಅಲ್ಲವೇ ಅಲ್ಲ. ತಂತ್ರಜ್ಞಾನ ಬಳಸಿ ಕ್ರಿಯೇಟಿವ್‌ ಆಗಿ ಮೋದಿಯವರನ್ನು ತೋಸಿದ್ದಾರೆ. ಮೋದಿ ಶ್ರೀವಲ್ಲಿ ಹಾಡಿನ ಸಿಗ್ನೇಚರ್‌ ಸ್ಟೆಪ್‌ ಹಾಕಿ, ಫೇಮಸ್‌ ಡೈಲಾಗ್‌ ತಗ್ಗೆದೆಲೆ ಎಂಬ ಕಾರ್ಟೂನ್‌ ರೀತಿಯ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಇದು ನೋಡುಗರಿಗೆ ತುಂಬಾ ಖುಷಿ ಕೊಡುವುದರ ಜೊತೆಗೆ ಫನ್ನಿಯಾಗಿದೆ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ. ಈಗ ಟಿಟ್ಟರ್‌, ಇನ್ಸ್ಟಾಗ್ರಾಂ, ಯೂಟ್ಯೂಬ್‌ ಎಲ್ಲಿ ನೋಡಿದ್ರೂ ಈ ವಿಡಿಯೋದ್ದೇ ಹವಾ….

Share Post