ಚಿತ್ರರಂಗಕ್ಕೆ ಮತ್ತೆ ಸಂಕಷ್ಟ, ದೆಹಲಿಯಲ್ಲಿ ಚಿತ್ರಮಂದಿರ ಬಂದ್
ದೆಹಲಿ: ದೇಶದಲ್ಲಿ ಈಗ ಮತ್ತೆ ಕೊರೋನಾ ತಾಂಡವವಾಡುತ್ತಿದೆ. ಅದರಲ್ಲಿಯೂ ಜನರಿಗೆ ಒಮಿಕ್ರಾನ್ ಭೀತಿ ಎದುರಾಗಿದ್ದು, ಆತಂಕ ಸೃಷ್ಟಿಸಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ನೈಟ್ ಕರ್ಫ್ಯೂ ವಿಧಿಸಿದೆ. ಹಾಗಾಗಿ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ನೈಟ್ ಕರ್ಪ್ಯೂ ವಿಧಿಸಲಾಗಿದೆ.
ಇನ್ನು ದೆಹಲಿಯಲ್ಲಿ ಕೊರೋನಾ ವೇಗವಾಗಿ ಹರಡುತ್ತಿದ್ದು, ನೈಟ್ ಕರ್ಫ್ಯೂ ಜಾರಿ ಮಾಡಿದೆ. ಜೊತೆಗೆ ಚಿತ್ರಮಂದಿರಗಳು ಸಹ ಬಂದ್ ಮಾಡಲಾಗಿದೆ. ಇದ್ದರಿಂದ ಆಗಿ ಮುಂದೆ ರಿಲೀಸ್ ಅಗಲಿರುವ ಸಿನಿಮಾಗಳಿಗೆ ತೊಂದರೆ ಎದುರಾಗಿದೆ.
ದೆಹಲಿಯಲ್ಲಿ ಸುಮಾರು ೫೬ ಚಿತ್ರಮಂದಿರಗಳಿವೆ. ಈ ಎಲ್ಲವೂ ಬಂದ್ ಆಗಲಿದೆ. ಇಲ್ಲಿಯವೆರೆಗೆ ಚಿತ್ರಮಂದಿರದಲ್ಲಿ ರಣ್ವೀರ್ ಸಿಂಗ್ ಅಭಿನಯದ ೮೩ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿತ್ತು. ಈ ಸಿನಿಮಾಕ್ಕೆ ಸರ್ಕಾರ ತೆರಿಗೆ ವಿನಾಯಿತಿ ನೀಡಿತ್ತು. ಆದರೆ ಇದೀಗ ಚಿತ್ರಮಂದಿರಗಳು ಬಂದ್ ಆಗಿದ್ದರಿಂದ ಚಿತ್ರರಂಗಕ್ಕೆ ಮತ್ತ ಸಂಕಷ್ಟ ಎದುರಾಗುತ್ತಿದೆ..
ಅಂದಹಾಗೇ ಹೊಸ ವರ್ಷ ಅಂದರೆ ಜನವರಿ ೭ ರಂದು ರಾಜ್ ಮೌಳಿಯ ಆರ್‌ಆರ್‌ಆರ್ ಸಿನಿಮಾ ಬಿಡುಗಡೆಯಾಗಲಿದೆ. ಈಗ ಬಂದ್ ಆಗಿರುವುದರಿಂದ ಚಿತ್ರತಂಡಕ್ಕೆ ದೊಡ್ಡ ತಲೆ ನೋವು ಆಗಿದೆ. ಜೊತೆಗೆ ಶಾಹಿದ್ ಕಪೂರ್ ಅಭಿನಯದ ಜೆರ್ಸಿ ಸಿನಿಮಾ ರಿಲೀಸ್ ಅಗಬೇಕಿತ್ತು. ಆದರೆ ಕೋವಿಡ್ ನಿಂದಾಗಿ ಈ ಸಿನಿಮಾವನ್ನು ಮುಂದೂಡಲಾಗಿದೆ.