NationalPolitics

NDA ಮೈತ್ರಿಕೂಟದ ನಾಯಕನಾಗಿ ಮೋದಿ ಆಯ್ಕೆ; ಭಾನುವಾರ ಪ್ರಮಾಣವಚನ

ನವದೆಹಲಿ; ಎನ್‌ಡಿಎ ಸಂಸದೀಯ ಪಕ್ಷದ ನಾಯಕನಾಗಿ ಮೋದಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.. ಇಂದು ನಡೆದ ಎನ್‌ಡಿಎ ಸಂಸದರ ಸಭೆಯಲ್ಲಿ ಮೋದಿಯವರನ್ನು ನಾಯಕನ್ನಾಗಿ ಆಯ್ಕೆ ಮಾಡಲಾಗಿದೆ.. ಇದಾದ ಮೇಲೆ ರಾಷ್ಟ್ರಪತಿಯನ್ನು ಭೇಟಿಯಾಗಲಿರುವ ಎನ್‌ಡಿಎ ನಾಯಕರು ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲು ಅವಕಾಶ ನೀಡುವಂತೆ ಹಕ್ಕು ಮಂಡಿಸಲಿದ್ದಾರೆ..

ರಾಷ್ಟ್ರಪತಿ ಮುರ್ಮು ಅವರು ಸರ್ಕಾರ ರಚನೆಗೆ ಒಪ್ಪಿಗೆ ಸೂಚಿಸಿದ ಮೇಲೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.. ಭಾನುವಾರ ಮೋದಿ ಹಾಗೂ ಸಂಪುಟ ಸದಸ್ಯರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ..

Share Post