CinemaNational

ʻಮತ್ತೆ ಮದುವೆʼ ಚಿತ್ರದ ಪೋಸ್ಟರ್‌ ರಿಲೀಸ್‌; ನರೇಶ್‌, ಪವಿತ್ರಾ ಲುಕ್‌ ನೋಡಿ

ಹೈದರಾಬಾದ್‌; ನಟ ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ಗ ಮದುವೆಯಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅದಕ್ಕೆ ಪುಷ್ಠಿ ಎಂಬಂತೆ ಕೆಲ ವಿಡಿಯೋಗಳು, ಫೋಟೋಗಳು ರಿಲೀಸ್‌ ಆಗಿದ್ದವು. ಆದ್ರೆ ಅವು ಸಿನಿಮಾವು ಎಂಬುದು ಈಗ ಸಾಬೀತಾಗಿದೆ. ಮತ್ತೆ ಮದುವೆ (ತೆಲುಗಿನಲ್ಲಿ ಮಳ್ಳಿ ಪೆಲ್ಲಿ..) ಚಿತ್ರದ ಫುಸ್ಟ್‌ ಲುಕ್‌ ಈಗ ಬಿಡುಗಡೆಯಾಗಿದೆ.

ಈ ಸಿನಿಮಾ ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ವಿಜಯ ಕೃಷ್ಣ ಮೂವೀಸ್ ಈ ಚಿತ್ರ ನಿರ್ಮಿಸಿದ್ದು, ಎಂ. ಎಸ್. ರಾಜು ನಿರ್ದೇಶನ ಮಾಡಿದ್ದಾರೆ.

ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ ಸ್ಟೋರಿಯೇ ಈ ಚಿತ್ರದ ಕತೆ ಎಂದು ಹೇಳಲಾಗುತ್ತಿದೆ. ಇಬ್ಬರೂ ತಮ್ಮ ನಿಜ ಜೀವನದ ಪಾತ್ರಗಳನ್ನು ಸಿನಿಮಾದಲ್ಲಿ ಮಾಡಿದ್ದಾರಂತೆ. ಚಿತ್ರದ ನಿರ್ಮಾಪಕ ಕೂಡಾ ನರೇಶ್‌ ಅವರೇ ಎಂದು ತಿಳಿದುಬಂದಿದೆ.

Share Post