BengaluruPolitics

ಎಸ್‌ಸಿ, ಎಸ್‌ಟಿ ಮೀಸಲಾತಿ ವಿಚಾರ; ಕಾಂಗ್ರೆಸ್‌ ಹೋರಾಟಕ್ಕೆ ಬಿಜೆಪಿ ಟಾಂಗ್‌

ಬೆಂಗಳೂರು; ಎಸ್‌ಸಿ, ಎಸ್‌ಟಿ ಮೀಸಲಾತಿ ವಿಚಾರವಾಗಿ ಬಿಜೆಪಿ ಸರ್ಕಾರ ಆಸೆ ತೋರಿಸಿ ಮೋಸ ಮಾಡುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಇಂದು ಇದರ ವಿರುದ್ಧ ಹೋರಾಟ ಕೂಡಾ ನಡೆಸಿದೆ. ಇತ್ತ ಕಾಂಗ್ರೆಸ್‌ ಹೋರಾಟದ ವಿರುದ್ಧ ಬಿಜೆಪಿ ಕಿಡಿಕಾರಿದೆ. ಮೀಸಲಾತಿ ಹೆಚ್ಚಳ ಕುರಿತ ವಿಧೇಯಕ ಮಂಡಿಸಿ, ವಿಧಾನಸಭೆಯಲ್ಲಿ ಅಂಗೀಕರಿಸಿ ಇದೀಗ ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಮಾಡಿರುವ ಸರಣಿ ಟ್ವೀಟ್‌ಗಳು ಕೆಳಗಿನಂತಿವೆ. 

 

ಟ್ವೀಟ್‌-೧

ಎಸ್‌ಸಿ/ಎಸ್‌ಟಿ ಮೀಸಲಾತಿ ಬಗ್ಗೆ ನಾವೀಗ ಕೊನೆಯ ಹೆಜ್ಜೆ ಇರಿಸಿದ್ದೇವೆ. ಈಗಾಗಲೇ ಅಧಿವೇಶನದಲ್ಲಿ ಮೀಸಲಾತಿ ಹೆಚ್ಚಳ ಕುರಿತ ವಿಧೇಯಕ ಮಂಡಿಸಿ, ವಿಧಾನಸಭೆಯಲ್ಲಿ ಅಂಗೀಕರಿಸಿ ಇದೀಗ ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ನಮ್ಮ ಸಂಕಲ್ಪವನ್ನು ಕಾರ್ಯರೂಪಕ್ಕೆ ತಂದಿದ್ದೇವೆ.

 

ಟ್ವೀಟ್‌-೨:

ರಾಜ್ಯವನ್ನು ದಶಕಗಳ ಕಾಲ ಆಳಿದ @INCKarnataka  ಭರವಸೆಗಳನ್ನು ಈಡೇರಿಸದೆ ಸತತವಾಗಿ ಅವುಗಳನ್ನು ಚುನಾವಣಾ ವಿಚಾರವನ್ನಾಗಿ ಮಾಡುತ್ತಲೇ ಬಂದಿತ್ತಷ್ಟೆ. ಆದರೆ ನಮ್ಮ ಸರ್ಕಾರ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ಮುಖ್ಯವಾಹಿನಿಗೆ ತರಲು ವ್ಯವಸ್ಥಿತ ಪ್ರಯತ್ನ ನಡೆಸಿ ಯಶ ಕಂಡಿದೆ.

 

ಟ್ವೀಟ್‌-೩;

ಈಗಲೂ ಮುಖ್ಯವಾಹಿನಿಯಿಂದ ಹೊರಗಿರುವ ಜಾಡಮಾಲಿಗಳು, ದೇವದಾಸಿಯರು, ಅಲೆಮಾರಿಗಳು, ದಕ್ಕಲಿಗರು, ಧೋಲಿಬಿಲ್‌,ಮಲೇರು, ಸೋಲಿಗರು ಮುಂತಾದ ಸಮುದಾಯಗಳಲ್ಲಿ ಹಿಂದುಳಿದಿರುವಿಕೆ ಹೆಚ್ಚಾಗಿದೆ. ಅವರನ್ನು ಮುಖ್ಯವಾಹಿನಿಗೆ ತರಲು ಮೀಸಲಾತಿ ಹೆಚ್ಚಿಸಿ ಚುನಾವಣಾ ರಾಜಕಾರಣವನ್ನೂ ಮೀರಿದ ಸಾಮಾಜಿಕ ಕಾರ್ಯವನ್ನು ನಮ್ಮ ಸರ್ಕಾರ ಮಾಡಿದೆ.

 

ಟ್ವೀಟ್‌-೪

ಆದರೆ ತಾನು ಇದುವರೆಗೂ ಭರವಸೆ ನೀಡುತ್ತಾ ಮತ ಪಡೆದ @INCKarnataka ಕ್ಕೆ ತಾನಿನ್ನು ಅವೇ ಭರವಸೆ ನೀಡುತ್ತಾ ಮತದಾರರನ್ನು ವಂಚಿಸಲು ಸಾಧ್ಯವಿಲ್ಲ ಎಂಬ ಅರಿವಾಗಿದೆ. ತನ್ನ ದಲಿತವಿರೋಧಿ ನೀತಿ ಬಯಲಾಗಿದ್ದಕ್ಕಾಗಿ @siddaramaiah ನಂಥ, ಮೊದಲೇ ಕ್ಷೇತ್ರವಿಲ್ಲದ ನಾಯಕರು, ಈಗ ಮತ್ತಷ್ಟು ಚಿಂತಿತರಾಗಿದ್ದಾರೆ.

 

ಟ್ವೀಟ್‌-೫

ಮೀಸಲಾತಿ ಹೆಚ್ಚಳದಿಂದ ಸಾಮಾಜಿಕ ಅಭ್ಯುದಯ ಸಾಧ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಅದನ್ನು ಸ್ವಾಗತಿಸುವ ಮನಸ್ಥಿತಿಯಲ್ಲೂ @INCKarnataka  ಇಲ್ಲ. ಏಕೆಂದರೆ ಹಿಂದುಳಿದವರು ಸದಾ ಹಿಂದುಳಿದೇ ಇದ್ದರೆ ಆ ಪಕ್ಷಕ್ಕೆ ರಾಜಕೀಯವಾಗಿ ಲಾಭ. ಆದರೆ ಇಷ್ಟೂ ವರ್ಷ ನಡೆಸುತ್ತಾ ಬಂದ ವಂಚನೆಗೆ ನಮ್ಮ ಸರ್ಕಾರ ಪೂರ್ಣವಿರಾಮ ಹಾಕಿದೆ.

Share Post