Cinema

ಹಿಂದಿ ಬಿಗ್‌ ಬಾಸ್‌ ಸೀಸನ್‌ 15ರ ವಿನ್ನರ್‌ – ನಟಿ ತೇಜಸ್ವಿನಿ ಪ್ರಕಾಶ್

ಮುಂಬೈ : ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್‌ ಅವರು ಹಿಂದಿ ಬಿಗ್‌ ಬಾಸ್‌ ಸೀಸನ್‌ 15ರ ವಿನ್ನರ್‌ ಆಗಿದ್ದಾರೆ. ಪ್ರತೀಕ್‌ ಸೆಹಜ್‌ಪಾಲ್‌ ಅವರನ್ನು ಹಿಂದಿಕ್ಕಿ ತೇಜಸ್ವಿನಿ ಪ್ರಕಾಶ್‌ ಅವರು ವಿಜಯ ಸಾಧಿಸಿದ್ದಾರೆ.

ವಿಜೇತರಿಗೆ ಮೀಸಲಿಟ್ಟಿದ್ದ 40ಲಕ್ಷ ನಗದು ಮತ್ತು ಟ್ರೋಫಿಯನ್ನು ನಿರೂಪಕರಾದ ಸಲ್ಮಾನ್‌ ಖಾನ್‌ ಅವರು ತೇಜಸ್ವಿನಿಗೆ ನೀಡಿದ್ದಾರೆ.

ಸೆಹಜ್‌ವಾಲ್‌ ಎರಡನೇ ಸ್ಥಾನ ಪಡೆದರೆ, ಕರಣ್‌ ಕುಂದ್ರಾ ಮೂರನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ.

ಇನ್ನು ಗೆಲುವಿನ ವಿಷಯವನ್ನು ತೇಜಸ್ವಿನಿ ಅವರು ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ.

Share Post