Cinema

ಕಪಿಲ್‌ ದೇವ್ ಹುಟ್ಟು ಹಬ್ಬಕ್ಕೆ ವಿಶ್‌ ಮಾಡಿದ ಕಿಚ್ಚ

ಬೆಂಗಳೂರು : ಕಿಚ್ಚ ಸುದೀಪ್‌ ಅವರಿಗೆ ಸಿನಿಮಾಗಿಂತಲೂ ಕ್ರಿಕೆಟ್‌ ಎಂದರೆ ಪ್ರೀತಿ ಜಾಸ್ತಿ. ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ಅಲ್ಲಿ ಅವರು ತಂಡವನ್ನು ಮುನ್ನಡೆಸಿರುವ ನಿದರ್ಶನಗಳನ್ನು ನಾವು ಬಲ್ಲೆವು. ಇನ್ನು ಕ್ರಿಕೆಟ್‌ ದೈತ್ಯರಾದ ವಿರೇಂದರ್‌ ಸೆಹ್ವಾಗ್‌ ಮತ್ತು ಇತರರನ್ನು ನಮ್ಮ ಕನ್ನಡಿಗರ ಜೊತೆ ಕ್ರಿಕೆಟ್‌ ಆಡಿಸಿದ ಖ್ಯಾತಿ ಸುದೀಪ್‌ ಅವರಿಗೆ ಸಲ್ಲಬೇಕು.

ಕಪಿಲ್‌ ದೇವ್‌ ಅವರ ಹುಟ್ಟು ಹಬ್ಬದ ಪ್ರಯುಕ್ತ ಕಿಚ್ಚ ಸುದೀಪ್‌ ಅವರು ವಿಶ್‌ ಮಾಡಿದ್ದಾರೆ. ಇತ್ತೀಚೆಗಷ್ಟೆ ಬಿಡುಗಡೆಯಾದ 83 ಸಿನಿಮಾ ವಿತರಣೆ ಮಾಡಿದ್ದ ಸುದೀಪ್‌ ಅವರು, ಆ ಸಂದರ್ಭದಲ್ಲಿ ಕಪಿಲ್‌ ಅವರನ್ನು ಭೇಟಿ ಆಗಿದ್ದರು. ನಂತರ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಈ ಫೋಟೋಗಾಗಿ  ೩೬ ವರ್ಷ ಕಾದಿದ್ದೇನೆ ಎಂದು ಬರೆದುಕೊಂಡಿದ್ದರು.

ಈಗ ಕಪಿಲ್‌ ಅವರ 63ನೇ ಹುಟ್ಟು ಹಬ್ಬಕ್ಕೆ  ಶುಭಾಷಯ ಕೋರಿ ಟ್ವೀಟ್‌ ಮಾಡಿದ್ದಾರೆ.

 

Share Post