Bengaluru

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ರಾಜ್ಯದಲ್ಲಿ ಸ್ಥಗಿತಗೊಂಡಿರುವ ಕಾಮಾಗಾರಿಗಳು, ನೀರಾವರಿ, ಗೋಮಾಳ ಇನ್ನಿತರೆ ವಿಚಾರಗಳಿಗೆ ಸಂಬಂಧಿಸಿದಂತೆ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸರ್ಕಾರ ಬಿಡುಗಡೆ ಮಾಡಿರುವ ಹಣ ಮಂಜೂರಾತಿ ಬಗ್ಗೆ ಮಾಹಿತಿ ನೀಡಿದ್ದಾರೆ.

ಸರ್ಕಾರ ಕೈಗೊಂಡಿರುವ ನಿರ್ಧಾರಗಳು.

೧. ಬೆಂಗಳೂರು ಪೂ.ತಾಲೂಕಿನ ೨೨ ಕೆರೆಗಳು, ಹೋಸಕೋಟೆ ದೊಡ್ಡಕೆರೆಗೆ ನೀರು ತುಂಬಿಸಲು ೯೩.೫೦ ಕೋಟಿ ಹಣ ಮಂಜೂರು
೨. ಕಾರ್ಕಳದ ನ್ಯಾಯಾಲದ ಸಂಕೀರ್ಣ ಕಟ್ಟಡಕ್ಕೆ ೧೯.೭೩ ಕೋಟಿ ಅನುದಾನ
೩. ಕೋಲಾರ-ಮುಳಬಾಗಿಲು ನ್ಯಾಯಾಲಯ ಸಂಕೀರ್ಣ೧೩.೮೦ಕೋಟಿ ಮಂಜೂರು
೪. ಉಡುಪಿಯ ಕಾಪು ತಾಲೂಕಿನಲ್ಲಿ ಜನಾರ್ಧನ ದೇವಾಲಯಕ್ಕೆ ಪಡು ಗ್ರಾಮದಲ್ಲಿ ೧೦ ಸೆಂಟ್‌ ಜಾಗ ನೀಡಲಾಗಿದೆ
೫ದೊಡ್ಡಬಳ್ಳಾಪುರ ಮಾರುತಿ ಎಜುಕೇಷನ್‌ ಟ್ರಸ್ಟ್‌ಗೆ ೨.೮ಕುಂಟೆ ಜಮೀನು ಮಂಜೂರು
೬. ಹಾಸನದ ಹಿರೀಸಾವೆಯ ಕಬ್ಬಳ್ಳಿಯ ಗ್ರಾಮದಲ್ಲಿ ೨೨ ಎಕರೆ ೩೬ ಗುಂಟೆ ಜಮೀನು ಆದಿಚುಂಚನಗಿರಿ ಮಠಕ್ಕೆ ಮಂಜೂರು
೭. ಬಾಗಲಕೋಟೆಯ ಶಿಗಿಕೇರಿ ಗ್ರಾಮದಲ್ಲಿ ೫ ಎಕರೆ ಗೋಮಾಳ ಮಂಜೂರು
೮. ನೋಂದಣಿ ಮತ್ತು ಮುದ್ರಾಂಕ ಕಚೇರಿ ಉಪಕರಣಗಳಿಗಾಗಿ ಸರ್ವಿಸ್‌ ನೀಡಲು ೪೦೬.೪೪ಕೋಟಿ ಅನುದಾನ
೯. ದ.ಕ. ಪ್ರೇರಣಾ ಸೇವಾ ಟ್ರಸ್ಟ್‌ ೨೫ ಸೆಂಟ್‌ ಭೂಮಿಯನ್ನು ನೀಡಲಾಗಿದೆ
೧೦. ಸಿದ್ದಲಿಂಗೇಶ್ವರ ಟ್ರಸ್ಟ್‌ಗೆ ನವರಸಪುರ ಗ್ರಾಮದಲ್ಲಿ ೫ಎಕರೆ ಭೂಮಿ
೧೧. ಜಲಜೀವನ್‌ ಮಿಷನ್‌ ಅಡಿಯಲ್ಲಿ ಗ್ರಾಮೀಣ ಮಟ್ಟದಲ್ಲಿ ನಲ್ಲಿ ನೀರು ಪೂರೈಕೆಗಾಗಿ  ೯೧೫೨ ವಿಶ್ವಬ್ಯಾಂಕ್‌ನಿಂದ  ಸಾಲ ಪಡೆಯಲು ಸಂಪುಟ ಒಪ್ಪಿಗೆ
೧೨. ಮೈಸೂರಿನ ಅಂಬೇಡ್ಕರ್‌ ಭವನಕ್ಕೆ ೧೬.೫ ಕೋಟಿ ಹಣ
೧೩. ಎಲೆಕ್ಟ್ರಿಕ್‌ ಬಸ್‌ ಖರೀದಿಗಾಗಿ ಬಿಎಂಟಿಸಿಗೆ ೧೦೦ ಕೋಟಿ ಸಹಾಯಧನ
೧೩. ಜೋಗ್‌ ಫಾಲ್ಸ್‌ನಲ್ಲಿ ಫೈವ್ ಸ್ಟಾರ್‌ ಹೊಟೇಲ್‌ ನಿರ್ಮಾಣ ಮತ್ತು ರೋಪ್‌ ವೇ ನಿರ್ಮಾಣಕ್ಕೆ ೧೧೬ ಕೋಟಿ ಅನುದಾನ
೧೪. ಬೆಂಗಳೂರು ಅಭಿವೃದ್ದಿಗೆ ಅಮೃತ್‌ ಯೋಜನೆಯಡಿ ೬,೦೦೦ ಕೋಟಿ
೧೫. ಅಂಬರೀಶ್‌ ಸ್ಮಾರಕ ನಿರ್ಮಾಣಕ್ಕೆ ೧೨ಕೋಟಿ ಅನುದಾನ

 

Share Post