National

ಯೋಧರ ಮೃತ ದೇಹ ಸಾಗಿಸುತ್ತಿದ್ದ ವಾಹನ ಅಪಘಾತ..!

ವೆಲ್ಲಿಂಗ್ಟನ್‌: ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿದ ಬಿಪಿನ್‌ ರಾವತ್‌ ಸೇರಿ 13 ಮಂದಿಯ ಮೃತದೇಹಗಳನ್ನು ದೆಹಲಿಗೆ ರವಾನೆ ಮಾಡಲಾಗುತ್ತಿದೆ. ಈ ವೇಳೆ ವೆಲ್ಲಿಂಗ್ಟನ್‌ನಿಂದ ಸೂಲೂರು ಸೇನಾ ನೆಲೆ ತೆಗೆದುಕೊಂಡು ಬರಲಾಗುತ್ತಿತ್ತು. ಈ ವೇಳೆ ಒಂದು ವಾಹನ ಗುಡ್ಡಕ್ಕೆ ಡಿಕ್ಕಿ ಹೊಡೆದಿದೆ. ಆದ್ರೆ ಇದ್ರಿಂದ ಯಾವುದೇ ಅಪಾಯವಾಗಿಲ್ಲ.

ಘಟನೆ ನಂತರ ವಾಹನದಲ್ಲಿ ಎರಡು ದೇಹಗಳನ್ನು ಮತ್ತೊಂದು ವಾಹನಕ್ಕೆ ಶಿಫ್ಟ್‌ ಮಾಡಿ ಮುಂದಕ್ಕೆ ಹೋಗಲಾಯಿತು. ನೀಲಗಿರಿ ಜಿಲ್ಲೆ ಪರ್ಲಿಯಾರು ಪ್ರದೇಶದಲ್ಲಿ  ಈ ಘಟನೆ ನಡೆದಿದೆ.

Share Post