ಸುಮಂತ್ ಜೊತೆ ಹಸೆಮಣೆ ಏರಿದ ಶುಭ ಪೂಂಜಾ
ಶುಭ ಪೂಂಜಾ ತಮ್ಮ ಮುಗ್ಧತೆಯಿಂದ ಹೆಸರುವಾಸಿಯಾದ ನಟಿ . ಕೆಲವು ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಅವರ ಅಸಲಿ ಪರಿಚಯವಾಗಿದ್ದು ಬಿಗ್ ಬಾಸ್‌ಗೆ ಬಂದಾಗ. ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಶುಭ ಪೂಂಜಾ ಅವರ ಮುಗ್ಧತೆಗೆ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದರು.
ಈಗ ಶುಭ ಪೂಂಜಾ ಮತ್ತು ಅವರ ಗೆಳೆಯ ಸುಮಂತ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಸರಳವಾಗಿ ಮದುವೆ ಆಗಿರುವ ಶುಭ ಪೂಂಜಾ ಅವರ ಮದುವೆಯಲ್ಲಿ ಬಿಗ್ ಬಾಸ್ ಸೀಸನ್ ೮ರ ವಿನ್ನರ್ ಮಂಜು ಪಾವಗಡ ಕೂಡ ಹಾಜರಿದ್ದರು.
ತಮ್ಮ ವೈವಾಹಿಕ ಜೀವನದ ಸಿಹಿ ಸುದ್ದಿಯನ್ನು ಶುಭ ಪೂಂಜಾ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
“ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು, ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ” ಎಂದು ಬರೆದುಕೊಂಡಿದ್ದಾರೆ.
ಸುಮಂತ್ ಅವರು ಮುಲತಃ ಉದ್ಯಮಿಯಾಗಿದ್ದಾರೆ.