CinemaDistricts

ರಜಿನಿ ಕಾಂತ್‌ರ ಜೈಲರ್‌ ಚಿತ್ರದಲ್ಲಿ ಬಣ್ಣ ಹಚ್ಚಿದ ಶಿವರಾಜ್‌ ಕುಮಾರ್‌

ಮಂಗಳೂರು; ಮಂಗಳೂರಿನಲ್ಲಿ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರನ್ನು ಶಿವರಾಜ್‌ ಕುಮಾರ್‌ ದಂಪತಿ ಭೇಟಿ ಮಾಡಿದ್ದಾರೆ. ಅದರ ಫೋಟೋ ಈಗ ವೈರಲ್‌ ಆಗುತ್ತಿದೆ. ರಜಿನಿಕಾಂತ್‌ ಅವರು ಜೈಲರ್‌ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಂಗಳೂರಿನಲ್ಲಿ ಎರಡು ದಿನಗಳ ಕಾಲ ಶೂಟಿಂಗ್‌ ನಡೆಯುತ್ತಿದ್ದು, ರಜಿನಿಕಾಂತ್‌ ನಿನ್ನೆಯಷ್ಟೇ ಮಂಗಳೂರಿಗೆ ಬಂದಿದ್ದಾರೆ.

ಶಿವರಾಜ್‌ ಕುಮಾರ್‌ ಕೂಡಾ ಇದೇ ಮೊದಲ ಬಾರಿಗೆ ತಮಿಳು ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ರಜಿನಿ ಕಾಂತ್‌ ಮತ್ತು ಶಿವಣ್ಣ ಭಾಗದ ಚಿತ್ರೀಕರಣ ಮಂಗಳೂರಿನಲ್ಲಿ ನಡೆಯುತ್ತಿದೆ. ಭದ್ರತೆಯ ದೃಷ್ಟಿಯಿಂದ ಚಿತ್ರತಂಡ ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ.

Share Post