ಕೇಂದ್ರ ಬಜೆಟ್-2022; ಬ್ರೀಫ್‌ಕೇಸ್‌ನಿಂದ ಕೆಂಪು ವಸ್ತ್ರದವರೆಗೂ..
ನವದೆಹಲಿ: 2019ರಲ್ಲಿ ಕೇಂದ್ರ ಬಜೆಟ್ ಮಂಡನೆಗೂ ಮೊದಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಒಂದು ಕೆಂಪು ಬಟ್ಟೆಯಲ್ಲಿ ಸುತ್ತಿದ ಬಜೆಟ್ ಪ್ರತಿಯನ್ನು ಪ್ರದರ್ಶನ ಮಾಡಿದ್ದರು. ಅದೇ ಮೊದಲ ಬಾರಿಗೆ ಬಟ್ಟೆಯಲ್ಲಿ ಸುತ್ತಿಕೊಂಡು ಬಜೆಟ್ ಪ್ರತಿ ತರಲಾಗಿತ್ತು. ಅಂದಿನಿಂದ ಇದೇ ಸಂಪ್ರದಾಯ ಮುಂದುವರೆದಿದೆ.
ಆದ್ರೆ ಈ ಮೊದಲು ವಿತ್ತ ಸಚಿವರು, ಬಜೆಟ್ ಮಂಡನೆಗೂ ಮೊದಲು ನಡೆಯುವ ಫೋಟೋ ಶೂಟ್‌ಗಳಲ್ಲಿ ಒಂದು ಲೆದರ್ ಸೂಟ್‌ಕೇಸ್ ಪ್ರದರ್ಶಿಸುತ್ತಿದ್ದರು. ಆ ಸೂಟ್‌ಕೇಸ್‌ನಲ್ಲೇ ಬಜೆಟ್ ಪ್ರತಿಗಳನ್ನು ಪಾರ್ಲಿಮೆಂಟ್‌ಗೆ ತರುತ್ತಿದ್ದರು. ಐವತ್ತು ವರ್ಷಗಳ ನಂತರ ಮಹಿಳಾ ಆರ್ಥಿಕ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ ಸೀತಾರಾಮನ್, ಸೂಟ್‌ಕೇಸ್ ನಲ್ಲಿ ಬಜೆಟ್ ಪ್ರತಿ ತರುವ ಸಂಪ್ರದಾಯವನ್ನು ಮುರಿದರು. ಬದಲಾಗಿ ಒಂದು ಕೆಂಪು ಬಟ್ಟೆಯಲ್ಲಿ ಸುತ್ತಿದ ಬಜೆಟ್ ಪ್ರತಿಯನ್ನು ಪ್ರದರ್ಶಿಸಲು ಶುರು ಮಾಡಿದರು.
ಅಕೌಂಟ್ ಕೀಪಿಂಗ್ ಬಕ್ ವರ್ಸಸ್ ಬ್ರೀಫ್ ಕೇಸ್
2019ರಲ್ಲಿ ಮೊದಲ ಬಾರಿ ಕೆಂಪು ಬಟ್ಟೆಯಲ್ಲಿ ಸುತ್ತಿದ ಬಜೆಟ್ ಪ್ರತಿ ಪ್ರದರ್ಶಿಸಿದ ನಂತರ ನಿರ್ಮಲಾ ಸೀತಾರಾಮನ್ ಮಾತನಾಡಿದ್ದರು. ನಾವು ಬ್ರಿಟೀಷರ ಮತ್ತನಿಂದ ಹೊರಬರುವ ಅವಶ್ಯಕತೆ ಇದೆ. ಏನೇ ಆದರೂ ಭಾರತೀಯ ಶೈಲಿಯಲ್ಲೇ ಮಾಡಬೇಕು. ಹಾಗೆಯೇ ಸುತ್ತಿನ ಬಟ್ಟೆಯನ್ನು ಹಿಡಿದುಕೊಳ್ಳುವುದು ಕೂಡಾ ಸುಲಭ ಎಂದು ಹೇಳಿದ್ದರು. ಬಜೆಟ್ ಬೌಗೆಟ್ ಎಂಬ ಪದ ಫ್ರೆಂಚ್ ನಿಂದ ಬಂದಿದೆ. ಬೌಗೆಟ್ ಅಂದರೆ ಚಿಕ್ಕ ಚೀಲ ಎಂದರ್ಥ.
ಬ್ರಿಟೀಷರ ವಾರಸತ್ವ
ಭಾರತ ದೇಶದಲ್ಲಿ ಆರ್ಥಿಕ ಬಜೆಟ್ ಮಂಡಿಸುವ ಪ್ರಕ್ರಿಯೆಯನ್ನು ಬ್ರಿಟೀಷರಿಂದ ಎರವಲು ಪಡೆಯುಲಾಯಿತು. ಬಜೆಟ್ ಪತ್ರಗಳನ್ನು ಸೂಟ್‌ಕೇಸ್‌ನಲ್ಲಿ ಇಟ್ಟುಕೊಂಡು ಪಾರ್ಲಿಮೆಂಟ್‌ಗೆ ಹೋಗುವ ಸಂಪ್ರದಾಯ ಆಗಿನಿಂದಲೇ ಶುರುವಾಯಿತು. ಬ್ರಿಟನ್‌ನಲ್ಲಿ ಆರ್ಥಿಕ ಮಂತ್ರಿಗಳು ಬದಲಾದರೂ, ಬಜೆಟ್ ಬ್ರೀಫ್ ಕೇಸ್ ಒಂದೇ ರೀತಿ ಇರುತ್ತದೆ. ಆರ್ಥಿಕ ಮಂತ್ರಿ ಬದಲಾಗುವಾಗ ಬಜೆಟ್‌ಗೆ ಬಳಸುವ ಸೂಟ್‌ಕೇಸ್‌ನ್ನು ಹೊಸ ಸಚಿವನಿಗೆ ಹಸ್ತಾಂತರಿಸಲಾಗುತ್ತದೆ. ಆದರೆ, ಈ ಸಂಪ್ರದಾಯವನ್ನು ಭಾರತ ಅನುಸರಿಸಲಿಲ್ಲ. ಭಾರತ ದೇಶದಲ್ಲಿ ಆರ್ಥಿಕ ಮಂತ್ರಿಗಳು ಬಜೆಟ್ ಮಂಡಿಸಲು ಅನೇಕ ವಿಧವಾದ ಸೂಟ್‌ಕೇಸ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದರು.
ನಾನಾ ಆಕಾರಗಳಲ್ಲಿರುತ್ತಿದ್ದ ಸೂಟ್‌ಕೇಸ್‌ಗಳು
ಭಾರತ ದೇಶದಲ್ಲಿ ಬಜೆಟ್ ಬ್ರೀಫ್ ಕೇಸ್ ಆಕಾರ, ಬಣ್ಣ ಎಲ್ಲವೂ ಮಂತ್ರಿಗಳ ಜೊತೆಗೆ ಅದೂ ಬದಲಾಗುತ್ತಿತ್ತು. ಸ್ವತಂತ್ರ ಭಾರತ ದೇಶದಲ್ಲಿ ಮೊದಲ ಬಜೆಟ್ ಮಂಡಿಸಿದ ಆಗಿ ಆರ್ಥಿಕ ಮಂತ್ರಿ ಆರ್.ಕೆ.ಷಣ್ಮುಖ ಚೆಟ್ಟಿ ಒಂದು ಲೆದರ್ ಸೂಟ್‌ಕೇಸ್ ನಲ್ಲಿ ಬಜೆಟ್ ಪ್ರತಿಗಳನ್ನು ತಂದಿದ್ದರು.
ರಹಸ್ಯದ ಸಂಕೇತ ಈ ಬ್ರೀಫ್ ಕೇಸ್
ಬ್ರಿಟೀಷರಂತೆ ಬಜೆಟ್ ಪ್ರತಿಗಳನ್ನು ಬ್ರೀಫ್‌ಕೇಸ್‌ಗಳಲ್ಲಿ ತೆಗೆದುಕೊಂಡು ಹೋಗುವುದು ಬಹುಶಃ ರಹಸ್ಯದ ಸಂಕೇತ ಇರಬಹುದು ಎಂದು ಕೆಲವರು ಹೇಳುತ್ತಾರೆ. ಒಂದು ದೇಶದ ಆರ್ಥಿಕ ಭವಿಷ್ಯತ್ ನಿರ್ಣಯಿಸುವ ಆರ್ಥಿಕ ಪತ್ರಗಳನ್ನು ಸಂಸತ್‌ನಲ್ಲಿ ಮಂಡಿಸುವವರೆಗೂ ರಹಸ್ಯವಾಗಿ ಬ್ರೀಫ್‌ಕೇಸ್‌ನಲ್ಲಿ ಇಡಲಾಗುತ್ತದೆ.