CinemaHealth

ತೆಲುಗಿನ ಹಿರಿಯ ನಟ ಚಲಪತಿ ರಾವ್‌ ನಿಧನ

ಹೈದರಾಬಾದ್‌; ಟಾಲಿವುಡ್‌ಗೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಇತ್ತೀಚೆಗಷ್ಟೇ ಸೂಪರ್‌ ಸ್ಟಾರ್‌ ಕೃಷ್ಣ ನಿಧನರಾಗಿದ್ದರು. ಇದಾದ ಮೇಲೆ ಕೈಕಾಲ ಸತ್ಯನಾರಾಯಣ ಸಾವನ್ನಪ್ಪಿದ್ದರು. ಇದೀಗ ಮತ್ತೊಬ್ಬ ಹಿರಿಯ ನಟನನ್ನು ತೆಲುಗು ಚಿತ್ರರಂಗ ಕಳೆದುಕೊಂಡಿದೆ. ಹಿರಿಯ ನಟ ಚಲಪತಿ ರಾವ್‌ ಇಂದು ಮುಂಜಾನೆ ದಿಢೀರ್‌ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.

ಇಂದು ಮುಂಜಾನೆ ಅವರಿಗೆ ತೀವ್ರ ಹೃದಯಘಾತಕ್ಕೊಳಗಾಗಿದ್ದು, ಸಾವನ್ನಪ್ಪಿದ್ದಾರೆ. ಕೆಲ ದಿನಗಳಿಂದ ಅವರು ಅನಾರೋಗ್ಯಕ್ಕೀಡಾಗಿದ್ದರು. ಆದ್ರೆ ಇಂದು ಇದ್ದಕ್ಕಿದ್ದಂತೆ ಹೃದಯಾಘಾತವಾಗಿದೆ. ಚಲಪತಿ ರಾವ್‌ ಅವರಿಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ ಹಾಗೂ ಪತ್ನಿ ಇದ್ದಾರೆ.

   ತೆಲುಗಿನಲ್ಲಿ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಚಲಪತಿ ರಾವ್‌ ನಟಿಸಿದ್ದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಪೋಷಕ ಪಾತ್ರ, ಖಳ ನಟನಪಾತ್ರ, ಹಾಸ್ಯಪಾತ್ರಗಳಲ್ಲಿ ಚಲಪತಿರಾವ್‌ ನಟನೆ ಮಾಡಿದ್ದರು.

 

Share Post