Cinema

ಕುಣಿದು ಕುಪ್ಪಳಿಸಿದ ಸಲ್ಲು ಭಾಯ್‌ ಮತ್ತು ಜೆನಿಲಿಯಾ

ಮುಂಬೈ: ನಿನ್ನೆ (ಸೋಮವಾರ) ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಹುಟ್ಟು ಹಬ್ಬದ ಸಂಭ್ರಮದಲ್ಲಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ಮುಂಬೈನ ರೆಸಾರ್ಟ್‌ವೊಂದರಲ್ಲಿ ಸೆಲಬ್ರೆಟಿಗಳಿಗೆ ಪಾರ್ಟಿ ನೀಡಿದ್ದಾರೆ. ಸಿನಿಮಾ ನಟ-ನಟಿಯರು, ಆಪ್ತರು ಪಾರ್ಟಿಯಲ್ಲಿ ಭಾಗಿಯಾಗಿದ್ರು. ಈ ವೇಳೆ ಸಲ್ಮಾನ್‌ ಖಾನ್‌ ಹಾಗೂ ಜೆನಿಲಿಯಾ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ. ಹಾಲಿವುಡ್‌ ಮ್ಯೂಸಿಕ್‌ಗೆ ಸ್ಟೆಪ್‌ ಹಾಕಿ ಎಂಜಾಯ್‌ ಮಾಡಿದ್ದಾರೆ.

೫೬ರ ಹರೆಯದಲ್ಲೂ ಸಲ್ಲು ಡಾನ್ಸ್‌ ನೋಡಿ ಅಭಿಮಾನಿಗಳಿ ಫಿದಾ ಆಗಿದ್ದಾರೆ. ಈ ನೃತ್ಯವನ್ನು ಇನ್ಸ್‌ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮಾಡಿ ಜೆನಿಲಿಯಾ ಹುಟ್ಟು ಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ. ಶನಿವಾರ ಸಂಜೆ ಹಾವು ಕಡಿತದಿಂದ ಆಸ್ಪತ್ರೆಯಲ್ಲಿದ್ರೂ ಸಹ ನಿನ್ನೆ ಯಾವುದೇ ಅಳುಕಿಲ್ಲದೆ ಸಲ್ಲು ತನ್ನ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.

Share Post