Cinema

ಮಾಸ್‌ ಮಹಾರಾಜ ರವಿತೇಜ ಜೊತೆ ಶ್ರೀಲೀಲಾ ಜೊತೆಯಾಗಿದ್ದಾರೆ.

ಬೆಂಗಳೂರು : ಕಿಸ್‌ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀಲಿಲಾ ಈಗ ಟಾಲಿವುಡ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ ಪೆಳ್ಳಿ ಸಂದಡಿ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರೀಲೀಲಾ ಟಾಲಿವುಡ್‌ ಮಂದಿಯ ಗಮನ ಸೆಳೆದಿದ್ದರು. ಈಗ ಅದರ ಫಲವಾಗಿ ಭರ್ಜರಿ ಆಫರ್‌ ಒಂದು ಹುಡುಕಿಕೊಂಡು ಬಂದಿದೆ.

ಮಾಸ್‌ ಮಹಾರಾಜ ಖ್ಯಾತಿಯ ರವಿತೇಜ ಜೊತೆ ನಟಿಸುವ ಅವಕಾಶ ಶ್ರೀಲೀಲಾ ಅವರಿಗೆ ಸಿಕ್ಕಿದೆ. ʼಧಮಾಕʼ ಸಿನಿಮಾದಲ್ಲಿ ರವಿತೇಜಾ ಜೊತೆ ನಾಯಕಿಯಾಗಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಕೂಡ ಇದರ ಬಗ್ಗೆ ಖಚಿತಪಡಿಸಿದೆ.

ಚಿತ್ರಕ್ಕೆ ನಾಯಕಿಯಾಗಿ ಶ್ರೀಲೀಲಾ ಅವರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಚಿತ್ರತಂಡ ಘೋಷಿಸಿದೆ. ಇನ್ನು ತಾಂತ್ರಿಕ ವರ್ಗದವರ ಬಗ್ಗೆ ಮತ್ತು ಸಿನಿಮಾ ಕುರಿತು ಹೆಚ್ಚಿನ ಡೀಟೈಲ್ಸ್‌ ಲಭ್ಯವಾಗಬೇಕಿದೆ.

Share Post